ವಾಸ್ತು ಸಲಹೆ - Vasthu Consultant

ವಾಸ್ತು ಸಲಹೆ - Vasthu Consultant ವಾಸ್ತುವಿಗೆ ಸಂಬಂಧಿಸಿದ ಸಲಹೆ ಹಾಗೂ ಮಾಹಿತಿ

ವರಾಹ ಜಯಂತಿಯ ಶುಭಾಶಯಗಳು🎉ಭೂದೇವಿಯನ್ನು ರಕ್ಷಿಸಲು ಮತ್ತು ಹಿರಣ್ಯಾಕ್ಷನೆಂಬ ರಾಕ್ಷಸನನ್ನು ಸಂಹರಿಸಲು ವಿಷ್ಣುವು ವರಾಹ (ಹಂದಿ) ರೂಪವನ್ನು ತಾಳಿದ...
13/09/2026

ವರಾಹ ಜಯಂತಿಯ ಶುಭಾಶಯಗಳು🎉

ಭೂದೇವಿಯನ್ನು ರಕ್ಷಿಸಲು ಮತ್ತು ಹಿರಣ್ಯಾಕ್ಷನೆಂಬ ರಾಕ್ಷಸನನ್ನು ಸಂಹರಿಸಲು ವಿಷ್ಣುವು ವರಾಹ (ಹಂದಿ) ರೂಪವನ್ನು ತಾಳಿದ ದಿನದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಮಂಗಳಾರತಿ ಮಾಡಿ ಮಂಗಳ ಮಹಿಮಾ |ನಂಗಜನಕ ಹರಿ ತುಂಗವಿಕ್ರಮಗೆ ||೧||ಅಗಣಿತಗುಣ ಅಗಮ್ಯಗೋಚರ |ಸುಗಮದಲಾಡುವ ನಿಗಮೋದ್ಧಾರಗೆ ||೧||ಬಗೆದು ಬೆನ್ನಿಲಿ ಭ...
17/06/2026

ಮಂಗಳಾರತಿ ಮಾಡಿ ಮಂಗಳ ಮಹಿಮಾ |
ನಂಗಜನಕ ಹರಿ ತುಂಗವಿಕ್ರಮಗೆ ||೧||

ಅಗಣಿತಗುಣ ಅಗಮ್ಯಗೋಚರ |
ಸುಗಮದಲಾಡುವ ನಿಗಮೋದ್ಧಾರಗೆ ||೧||

ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ |
ಭಗತವತ್ಸಲ ಸ್ವಾಮಿ ನಗಧರಗೆ ||೨||

ಜಗತಿಯ ಕದ್ದೊಯ್ದ ಸುರನ ಸೀಳಿದ |
ಜಗದೋತ್ತಮನಾದ ಜಗದೋದ್ಧಾರಗೆ ||೩||

ದುರುಳದೈತ್ಯನ ಬೆರಳುಗುರಿಲಿ ಸೀಳಿದ |
ತರಳ ಪ್ರಹ್ಲಾದಗೊಲಿದ ನರಹರಿಗೆ ||೪||

ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು |
ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ ||೫||

ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ |
ಪರಮಪುರುಷನಾಗಿಹ ತಪೋನಿಧಿಗೆ ||೬||

ದೇವತಿಗಳ ಸೆರೆಯ ಬಿಡಿಸಿದ ದೇವನು |
ಪಾವನಮೂರುತಿ ಅಹಲ್ಯೋದ್ದಾರಗೆ ||೭||

ಯದುಕುಲತಿಲಕ ವಿದುರವಂದಿತನಾದ |
ಬುಧಜನಪಾಲ ಮದನಮೋಹನಗೆ ||೮||

ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ |
ಹೊಳೆವದೋರಿದ ಚಲುವಿಲಿ ಮಹಾಮುನಿಗೆ ||೯||

ಮುದ್ದು ತೇಜಯನೇರಿ ತಿದ್ದಿ ರಾವುತನಾದ |
ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ ||೧೦||

ಕೃತಿಕಾರರು
ಶ್ರೀ ಕಾಖಂಡಕಿ ಶ್ರೀ ಮಹಿಪತಿರಾಯರು

ಶುಭೋದಯ

ಜೈ ಶ್ರೀರಾಮ್ 🙏
16/06/2026

ಜೈ ಶ್ರೀರಾಮ್ 🙏

15/06/2026
15/06/2026

ಸ್ತ್ರೀಯ ಬಗ್ಗೆ ನಾನು ಓದಿದ ಅತ್ಯುತ್ತಮ ಲೇಖನಗಳಲ್ಲಿ ಇದು ಒಂದು…

*ಸ್ತ್ರೀ…*
ದೇವರು ಸ್ತ್ರೀಯನ್ನು ಸೃಷ್ಟಿಸಿದಾಗ, ಆ ಶುಕ್ರವಾರ ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದ…
ಆಗ ಒಬ್ಬ ದೇವದೂತ ಕೇಳಿದ,
“ಇಷ್ಟು ಸಮಯ ಯಾಕೆ ತೆಗೆದುಕೊಳ್ಳುತ್ತಿದೆ?”

ದೇವರು ಹೇಳಿದ,
“ಅವಳನ್ನು ರೂಪಿಸಲು ನಾನು ಎಷ್ಟು ಷರತ್ತುಗಳನ್ನು ಪೂರೈಸಬೇಕು ನೋಡಿದ್ದೀಯಾ?”

ಅವಳು ಎಲ್ಲಾ ಪರಿಸ್ಥಿತಿಗಳಲ್ಲೂ ಕೆಲಸ ಮಾಡಲು ಸಮರ್ಥಳಾಗಿರಬೇಕು.

ಅವಳು ಒಂದೇ ಸಮಯದಲ್ಲಿ ಅನೇಕ ಮಕ್ಕಳನ್ನು ನೋಡಿಕೊಳ್ಳಲು ಶಕ್ತಳಾಗಿರಬೇಕು.

ಅವಳ ಅಪ್ಪುಗೆ ಮೊಣಕಾಲಿನ ಗಾಯವಿರಲಿ ಅಥವಾ ಮುರಿದ ಹೃದಯವಿರಲಿ — ಎಲ್ಲವನ್ನೂ ಗುಣಪಡಿಸುವಂತಿರಬೇಕು.

ಇದೆಲ್ಲವನ್ನೂ ಅವಳು ಕೇವಲ ಎರಡು ಕೈಗಳಿಂದ ಮಾಡಬೇಕು.

ಕಾಯಿಲೆಯಾಗಿದ್ದರೂ ತನ್ನನ್ನು ತಾನು ಸರಿಪಡಿಸಿಕೊಂಡು ದಿನಕ್ಕೆ 18 ಗಂಟೆ ಕೆಲಸ ಮಾಡಲು ಶಕ್ತಳಾಗಿರಬೇಕು.

ದೇವದೂತ ಚಕಿತನಾದ,
“ಕೇವಲ ಎರಡು ಕೈಗಳೇ? ಅಸಾಧ್ಯ!”
“ಮತ್ತು ಇದೇ ಸಾಮಾನ್ಯ ರಚನೆಯೇ?”

ದೇವದೂತ ಸ್ತ್ರೀಯ ಹತ್ತಿರ ಹೋಗಿ ಅವಳನ್ನು ಸ್ಪರ್ಶಿಸಿದ.
“ಪ್ರಭು, ನೀವು ಅವಳನ್ನು ತುಂಬಾ ಮೃದುವಾಗಿ ಮಾಡಿದ್ದೀರಿ.”

ದೇವರು ಹೇಳಿದ,
“ಅವಳು ಮೃದು, ಆದರೆ ನಾನು ಅವಳನ್ನು ತುಂಬಾ ಬಲಿಷ್ಠಳನ್ನಾಗಿ ಮಾಡಿದ್ದೇನೆ. ಅವಳು ಎಷ್ಟು ಸಹಿಸಬಲ್ಲಳು ಮತ್ತು ಎಷ್ಟು ಕಷ್ಟಗಳನ್ನು ಗೆಲ್ಲಬಲ್ಲಳು ಎಂಬುದನ್ನು ನೀನು ಊಹಿಸಲೂ ಸಾಧ್ಯವಿಲ್ಲ.”

ದೇವದೂತ ಕೇಳಿದ,
“ಅವಳು ಯೋಚಿಸಬಲ್ಲಳೇ?”

ದೇವರು ಹೇಳಿದ,
“ಅವಳು ಯೋಚಿಸುವುದು ಮಾತ್ರವಲ್ಲ, ತರ್ಕ ಮಾಡುತ್ತಾಳೆ, ನಿರ್ಧಾರ ತೆಗೆದುಕೊಳ್ಳುತ್ತಾಳೆ ಮತ್ತು ಸಂವಾದವನ್ನೂ ನಡೆಸುತ್ತಾಳೆ.”

ದೇವದೂತ ಅವಳ ಕೆನ್ನೆಯನ್ನು ಸ್ಪರ್ಶಿಸಿದ…
“ಪ್ರಭು, ಇಲ್ಲಿಂದ ಏನೋ ಸೋರುತ್ತಿದೆ! ನೀವು ಅವಳ ಮೇಲೆ ತುಂಬಾ ಹೊರೆ ಹಾಕಿದ್ದೀರಿ.”

ದೇವರು ಹೇಳಿದ,
“ಅದು ಸೋರುತ್ತಿಲ್ಲ… ಅವು ಕಣ್ಣೀರು.”

“ಅವು ಯಾವುದಕ್ಕಾಗಿ?” ದೇವದೂತ ಕೇಳಿದ.

ದೇವರು ಹೇಳಿದ,
“ಕಣ್ಣೀರು ಅವಳ ದುಃಖ, ಸಂದೇಹ, ಪ್ರೀತಿ, ಒಂಟಿತನ, ನೋವು ಮತ್ತು ಅಭಿಮಾನವನ್ನು ವ್ಯಕ್ತಪಡಿಸುವ ಮಾರ್ಗ.”

ಇದನ್ನು ಕೇಳಿ ದೇವದೂತ ಬಹಳ ಪ್ರಭಾವಿತನಾದ.
“ಪ್ರಭು, ನೀವು ನಿಜವಾಗಿಯೂ ಅದ್ಭುತ. ನೀವು ಎಲ್ಲವನ್ನೂ ಯೋಚಿಸಿದ್ದೀರಿ.
ಅವಳು ನಿಜಕ್ಕೂ ವಿಲಕ್ಷಣ ಸ್ತ್ರೀ.”

ದೇವರು ಹೇಳಿದ,
“ಹೌದು, ಅವಳು ಹಾಗೆಯೇ.

ಅವಳಲ್ಲಿ ಪುರುಷನನ್ನು ಬೆರಗುಗೊಳಿಸುವ ಶಕ್ತಿ ಇದೆ.

ಅವಳು ಸಂಕಷ್ಟಗಳನ್ನು ಎದುರಿಸಬಲ್ಲಳು ಮತ್ತು ಭಾರವಾದ ಜವಾಬ್ದಾರಿಗಳನ್ನು ಹೊರಬಲ್ಲಳು.

ಅವಳಲ್ಲಿ ಸಂತೋಷ, ಪ್ರೀತಿ ಮತ್ತು ಸ್ವಂತ ಅಭಿಪ್ರಾಯಗಳಿವೆ.

ಕಿರುಚಬೇಕು ಅನ್ನಿಸಿದಾಗಲೂ ಅವಳು ನಗುತ್ತಾಳೆ.

ಅಳಬೇಕು ಅನ್ನಿಸಿದಾಗಲೂ ಹಾಡುತ್ತಾಳೆ, ಸಂತೋಷದಲ್ಲಿ ಅಳುತ್ತಾಳೆ ಮತ್ತು ಭಯವಾದರೂ ನಗುತ್ತಾಳೆ.
ಅವಳು ನಂಬಿದ ವಿಷಯಕ್ಕಾಗಿ ಹೋರಾಡುತ್ತಾಳೆ.
ಅವಳ ಪ್ರೀತಿ ನಿಸ್ವಾರ್ಥ.
ಸಂಬಂಧಿಕರು ಅಥವಾ ಸ್ನೇಹಿತರನ್ನು ಕಳೆದುಕೊಂಡಾಗ ಅವಳ ಹೃದಯ ಒಡೆಯುತ್ತದೆ, ಆದರೆ ಆದರೂ ಬದುಕಲು ಶಕ್ತಿ ಕಂಡುಕೊಳ್ಳುತ್ತಾಳೆ.”

ದೇವದೂತ ಕೇಳಿದ,
“ಹಾಗಾದರೆ ಅವಳು ಪರಿಪೂರ್ಣಳೇ?”

ದೇವರು ಹೇಳಿದ,
“ಇಲ್ಲ… ಅವಳಲ್ಲಿ ಒಂದೇ ಒಂದು ಕೊರತೆ ಇದೆ —
ಅವಳು ಅನೇಕ ಬಾರಿ ತನ್ನದೇ ಬೆಲೆಯನ್ನು ಮರೆತುಬಿಡುತ್ತಾಳೆ.”

ನೀವು ಗೌರವಿಸುವ ಸ್ತ್ರೀಯರಿಗೆ ಇದನ್ನು ಕಳುಹಿಸಿ 👍
ಮತ್ತು ಸ್ತ್ರೀಯನ್ನು ಗೌರವಿಸುವ ಪುರುಷರಿಗೂ ಕಳುಹಿಸಿ 👍👍

ಇದು ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ಭಗವಾನ್ ಶ್ರೀಕೃಷ್ಣನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ.ಇಲ್ಲಿನ ನಂಬಿಕೆಯ ಪ್ರಕಾರ, ದ...
13/06/2026

ಇದು ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ಭಗವಾನ್ ಶ್ರೀಕೃಷ್ಣನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ.

ಇಲ್ಲಿನ ನಂಬಿಕೆಯ ಪ್ರಕಾರ, ದೇವರಿಗೆ ಒಂದು ದಿನ ನೈವೇದ್ಯ (ಭೋಜನ) ಅರ್ಪಿಸದಿದ್ದರೂ ಸಹ ಇಲ್ಲಿರುವ ಕೃಷ್ಣನ ವಿಗ್ರಹವು ದಿನದಿಂದ ದಿನಕ್ಕೆ ಸಣ್ಣಗಾಗುತ್ತಾ ಹೋಗುತ್ತದೆ.

ಇದೇ ಕಾರಣಕ್ಕೆ ಇಲ್ಲಿ ದಿನದ 24 ಗಂಟೆಯೂ ಸಮಯಕ್ಕೆ ಸರಿಯಾಗಿ ಪೂಜೆ, ನೈವೇದ್ಯ ನಡೆಯುತ್ತದೆ. ರಾತ್ರಿ 9 ಗಂಟೆಗೆ ಮುಚ್ಚುವ ದೇವಸ್ಥಾನದ ಬಾಗಿಲನ್ನು, ಮಧ್ಯರಾತ್ರಿ 2 ಗಂಟೆಗೇ ತೆರೆಯಲಾಗುತ್ತದೆ ಮತ್ತು ಮುಂಜಾನೆ 3 ಗಂಟೆಗೆ ದೇವರಿಗೆ ಆಹಾರವನ್ನು ಅರ್ಪಿಸಲಾಗುತ್ತದೆ. ಈ ವಿಶಿಷ್ಟ ದೇವಾಲಯದ ರೋಚಕ ಕಥೆ ಇಲ್ಲಿದೆ:

ಗ್ರಹಣ ಕಾಲದಲ್ಲೂ ಮುಚ್ಚದ ಗರ್ಭಗುಡಿ:

ಸಾಮಾನ್ಯವಾಗಿ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದ ಸಮಯದಲ್ಲಿ ದೇಶದಾದ್ಯಂತ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಯಾವುದೇ ಪೂಜೆ ಅಥವಾ ನೈವೇದ್ಯಗಳು ನಡೆಯುವುದಿಲ್ಲ. ಆದರೆ, ಕೇರಳದ ತಿರುವರಪ್ಪು ಶ್ರೀಕೃಷ್ಣ ಸ್ವಾಮಿ ದೇವಾಲಯದಲ್ಲಿ (Thiruvarappu Sree Krishna Swamy Temple) ನಿಯಮಗಳೇ ಬೇರೆ!

ಕೇರಳದ ಮೀನಾಚಿಲ್ ನದಿಯ ದಂಡೆಯ ಮೇಲೆ ನೆಲೆಸಿರುವ ಈ ಸುಂದರ ದೇವಾಲಯವು ತನ್ನ ಭವ್ಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಹಿಂದೆ ಒಮ್ಮೆ ಸೂರ್ಯಗ್ರಹಣದ ಸಮಯದಲ್ಲಿ ಇತರ ದೇವಾಲಯಗಳಂತೆ ಈ ಮಂದಿರವನ್ನೂ ಮುಚ್ಚಲಾಗಿತ್ತು. ಆದರೆ ಮರುದಿನ ಅರ್ಚಕರು ಗರ್ಭಗುಡಿಯನ್ನು ತೆರೆದಾಗ ಕೃಷ್ಣನ ಮೂರ್ತಿಯನ್ನು ನೋಡಿ ದಂಗಾಗಿದ್ದರು. ದೇವರಿಗೆ ನೈವೇದ್ಯ ಸಿಗದೆ ಕೃಷ್ಣನ ಮೂರ್ತಿ ತೀರಾ ಸಣ್ಣದಾಗಿ, ಕೃಶವಾಗಿ ಕಂಡುಬಂದಿತ್ತು.
ಅರ್ಚಕರು ಕೈಯಲ್ಲಿ ಕೀ ಜೊತೆ ಸುತ್ತಿಗೆಯನ್ನು ಏಕೆ ಇಟ್ಟುಕೊಳ್ಳುತ್ತಾರೆ?

ಗ್ರಹಣದ ದಿನ ನಡೆದ ಈ ಘಟನೆಯಿಂದ ಅರ್ಚಕರೆಲ್ಲರೂ ಕಂಗಾಲಾಗಿದ್ದರು. ಅದೇ ಸಮಯದಲ್ಲಿ ಆದಿ ಶಂಕರಾಚಾರ್ಯರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ಜ್ಞಾನದೃಷ್ಟಿಯಿಂದ ನೋಡಿ, “ಶ್ರೀಕೃಷ್ಣನನ್ನು ಇಡೀ ದಿನ ಹಸಿದಿಟ್ಟಿದ್ದರಿಂದಲೇ ಮೂರ್ತಿ ಹೀಗಾಗಿದೆ” ಎಂದು ತಿಳಿಸಿದರು. ಅಂದಿನಿಂದ ಇಂದಿನವರೆಗೆ ಗ್ರಹಣವೇ ಇರಲಿ, ಯಾವುದೇ ಸೂತಕವೇ ಇರಲಿ ಈ ದೇವಾಲಯದಲ್ಲಿ ಕೃಷ್ಣನಿಗೆ ನೈವೇದ್ಯ ನಿಲ್ಲಿಸುವುದೇ ಇಲ್ಲ.

ವಿಶ್ವದಲ್ಲೇ ಅತಿ ಮುಂಜಾನೆ, ಅಂದರೆ ರಾತ್ರಿ 3 ಗಂಟೆಗೆ ದೇವರಿಗೆ ಭೋಜನ ಉಣಿಸುವ ಏಕೈಕ ಕೃಷ್ಣ ದೇವಾಲಯ ಇದಾಗಿದೆ. ಸರಿಯಾದ ಸಮಯಕ್ಕೆ ನೈವೇದ್ಯ ಅರ್ಪಿಸಬೇಕಾದ ಕಾರಣ, ರಾತ್ರಿ 2 ಗಂಟೆಗೇ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ದೇವಸ್ಥಾನದ ಮುಖ್ಯ ಅರ್ಚಕರು ಬಾಗಿಲಿನ ಚಾವಿ(Door Key) ಯ ಜೊತೆಗೆ ಕೈಯಲ್ಲಿ ಒಂದು ಸುತ್ತಿಗೆಯನ್ನು (Hammer) ಸದಾ ಹಿಡಿದುಕೊಂಡಿರುತ್ತಾರೆ. ಒಂದು ವೇಳೆ ಚಾವಿಯಿಂದ ಬಾಗಿಲು ತೆರೆಯುವುದು ತಡವಾದರೆ, ತಕ್ಷಣವೇ ಸುತ್ತಿಗೆಯಿಂದ ಬೀಗ ಮುರಿದು ಒಳಹೋಗಿ ದೇವರಿಗೆ ಆಹಾರ ನೀಡಲು ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರಿಗಾಗಿ ಈ ದೇವಾಲಯ ಬೆಳಿಗ್ಗೆ 5 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ.ಕೃಷ್ಣನಿಗೆ ನೈವೇದ್ಯ ಅರ್ಪಿಸುವುದು ಏಕೆ ಅಷ್ಟು ಕಡ್ಡಾಯ?

ಪುರಾಣಗಳ ಪ್ರಕಾರ, ಈ ದೇವಾಲಯದಲ್ಲಿ ಸ್ಥಾಪಿಸಲಾದ ಶ್ರೀಕೃಷ್ಣನ ಮೂರ್ತಿಯು ಕಂಸನನ್ನು ವಧಿಸಿದ ನಂತರದ ರೂಪವನ್ನು ಬಿಂಬಿಸುತ್ತದೆ. ಮಹಾ ಯುದ್ಧದ ನಂತರ ಶ್ರೀಕೃಷ್ಣನಿಗೆ ತೀವ್ರವಾದ ಹಸಿವು ಉಂಟಾಗಿತ್ತು ಎನ್ನಲಾಗುತ್ತದೆ. ಆದ್ದರಿಂದಲೇ ಇಲ್ಲಿನ ಕೃಷ್ಣನಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುವುದು ಅತ್ಯಂತ ಕಡ್ಡಾಯವಾಗಿದೆ. ಇಲ್ಲದಿದ್ದರೆ ಮೂರ್ತಿ ಕರಗಲು ಆರಂಭವಾಗುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ.

ಇಲ್ಲಿನ ಪ್ರಸಾದದ ವಿಶೇಷತೆ:

ಈ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿನ ಪ್ರಸಾದವನ್ನು ಪಡೆದುಕೊಳ್ಳದೇ ವಾಪಸ್ ಹೋಗಬಾರದು ಎಂಬ ಕಠಿಣ ನಿಯಮವಿದೆ. ಇಲ್ಲಿನ ಪ್ರಸಾದವನ್ನು ಸೇವಿಸುವುದರಿಂದ ನವಗ್ರಹ ದೋಷ, ಗ್ರಹಣ ದೋಷ, ಸಂತಾನ ದೋಷ, ಸರ್ಪ ದೋಷ, ವಿವಾಹದ ಅಡೆತಡೆಗಳು ಮತ್ತು ಬ್ರಹ್ಮಹತ್ಯೆಯಂತಹ ಮಹಾ ಪಾಪಗಳೂ ಸಹ ನಿವಾರಣೆಯಾಗುತ್ತವೆ ಎಂದು ಸ್ಥಳೀಯರು ನಂಬುತ್ತಾರೆ.

ದೇವಾಲಯದ ಆವರಣದ ವಿಶೇಷತೆ:

ಈ ವಿಶಿಷ್ಟ ದೇವಾಲಯದ ನಾಲ್ಕೂ ದಿಕ್ಕುಗಳ ಗೋಡೆಗಳ ಮೇಲೆ ವಿವಿಧ ದೇವತೆಗಳ ಮೂರ್ತಿಗಳಿವೆ. ಮೂಡಣದಲ್ಲಿ (ಪೂರ್ವ) ಕೋಚಂಬಲಂ ಜಿ ದೇವಸ್ಥಾನವಿದ್ದರೆ, ಉತ್ತರದಲ್ಲಿ ಶಿವ ಮತ್ತು ನರಸಿಂಹ ಸ್ವಾಮಿಯ ಮೂರ್ತಿಗಳಿವೆ. ಪಶ್ಚಿಮದಲ್ಲಿ ಗಣಪತಿ, ಸುಬ್ರಹ್ಮಣ್ಯ ಹಾಗೂ ಶಾಸ್ತಾ (ಅಯ್ಯಪ್ಪ) ನೆಲೆಸಿದ್ದರೆ, ದಕ್ಷಿಣದಲ್ಲಿ ಯಕ್ಷ ಮತ್ತು ಗಂಧರ್ವರ ಸನ್ನಿಧಿಯಿದೆ.

ಇಂದು ಹಲವಾರು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಶಾಲೆ ಬಿಟ್ಟು ಬೇರೆ ದಾರಿಯನ್ನು ಹಿಡಿಯುತ್ತಾರೆ. ಆದರೆ ಅದರ ಪರಿಣಾಮ ಏನು ಎಂದು ಯೋಚಿಸಿದ್ದೀರಾ? ಶಿಕ...
13/06/2026

ಇಂದು ಹಲವಾರು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಶಾಲೆ ಬಿಟ್ಟು ಬೇರೆ ದಾರಿಯನ್ನು ಹಿಡಿಯುತ್ತಾರೆ. ಆದರೆ ಅದರ ಪರಿಣಾಮ ಏನು ಎಂದು ಯೋಚಿಸಿದ್ದೀರಾ? ಶಿಕ್ಷಣವೇ ನಮ್ಮ ಭವಿಷ್ಯದ ಬಲವಾದ ಅಡಿಪಾಯ.

ಒಂದು ತಪ್ಪು ನಿರ್ಧಾರ ಜೀವನದ ದಿಕ್ಕನ್ನೇ ಬದಲಾಯಿಸಬಹುದು.

ಈ ಚಿತ್ರದಲ್ಲಿ ಕಾಣುವಂತೆ, ಶಾಲೆ ಬಿಟ್ಟು ಹೋದ ನಂತರ ಜೀವನದಲ್ಲಿ ಎದುರಾಗುವ ಕಷ್ಟಗಳು ಮತ್ತು ನಿಜಸ್ಥಿತಿ ನಮಗೆ ಸ್ಪಷ್ಟವಾಗುತ್ತದೆ.

💡 ಶಿಕ್ಷಣವೇ ಶಕ್ತಿ
💡 ಶಿಕ್ಷಣವೇ ಸ್ವಾಭಿಮಾನ
💡 ಶಿಕ್ಷಣವೇ ಉತ್ತಮ ಭವಿಷ್ಯ

ಮಕ್ಕಳು ಶಾಲೆಗೆ ಹೋಗಬೇಕು, ತಮ್ಮ ಕನಸುಗಳನ್ನು ಸಾಕಾರಗೊಳಿಸಬೇಕು. ಪಾಲಕರು ಮತ್ತು ಸಮಾಜ ಒಟ್ಟಾಗಿ ಮಕ್ಕಳನ್ನು ಶಿಕ್ಷಣದ ಕಡೆಗೆ ಪ್ರೋತ್ಸಾಹಿಸಬೇಕು.

👉 “ಇವತ್ತಿನ ಕಲಿಕೆ, ನಾಳೆಯ ಬೆಳಕು”

Address

Bangalore
560070

Website

Alerts

Be the first to know and let us send you an email when ವಾಸ್ತು ಸಲಹೆ - Vasthu Consultant posts news and promotions. Your email address will not be used for any other purpose, and you can unsubscribe at any time.

Shortcuts

Share