17/12/2022
#ಶಾಸಕರು #ಕೆಲಸಗಳು
#ಶಾಸಕರಲ್ಲದವರು #ಪ್ರಚಾರ
ಸಿಟಿ,ಟೌನ್ಗಳಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಶಾಸಕರಿಂದ ಆಗಿರೋದಲ್ಲ ಅದುಕೇಂದ್ರಯೋಜನೆಯಂತೆ ನಡೆಯುವುದು, ಸ್ಮಾರ್ಟ್ ಸಿಟಿ ಕೇಂದ್ರದ ಯೋಜನೆ,
ಪಟ್ಟಣ ಪಂಚಾಯತ್, ಮುನ್ಸಿಪಲ್ ಗಳ ರಸ್ತೆ,ಚರಂಡಿ ,ನೀರು ಪ.ಪಂಚಾಯಿತಿ ಮುನ್ಸಿಪಲ್ ನವರ ಜವಬ್ದಾರಿ,
ಇನ್ನು ಶಾಸಕರಿಗೆ ಉಳಿಯೋ ಕೆಲಸಗಳು ಯಾವ್ಯವು
ರಾಜ್ಯಸರ್ಕಾರದ ರಸ್ತೆ,ಬಸ್ ನಿಲ್ದಾಣ, ಸೇತುವೆ, ನೀರಾವರಿ ಸಂಬಂಧ ಕೆಲಸಗಳು, ವಿದ್ಯುತ್ ಸಂಬಂಧಿಸಿದ ಕೆಲಸಗಳು, ರಾಜ್ಯದ ಅಡಿಯಲ್ಲಿ ಬರುವ ಧಾರ್ಮಿಕ ಕೇಂದ್ರಗಳು, ಸ್ಮಾರಕಗಳು, ಕೆರೆ,ಕಟ್ಟೆ ,ಉದ್ಯಾನವನ,
ಕಾನೂನು,ಕಾಕಿ ವ್ಯವಸ್ಥೆ , ಇಲಾಖೆಯ ಆಧುನಿಕತೆ ಇತ್ಯಾದಿ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಕೆಲಸಗಳು ಸರಿಯಾಗಿ ,ನ್ಯಾಯಯುತ ವಾಗಿ ನೆಡೆಯುವಂತೆ ನೋಡಿಕೊಳ್ಳುದು...
ರಾಜ್ಯಸರ್ಕಾರದಿಂದ ಬರುವ ಹಣ ಸರಿಯಾಗಿ ಬಂದ ಉದ್ದೇಶಕ್ಕೆ ವ್ಯಯವಾಗುವಂತೆ ನೋಡಿಕೊಳ್ಳುವುದು, ಕ್ಷೇತ್ರದ ನೈಸರ್ಗಿಕ ಹಾನಿ,ಬೆಳೆ ಹಾನಿ, ದುರ್ಮರಣಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು, ಯೋಗ್ಯವೆನಿಸಿದವುಗಳಿಗೆ ಹಣಕಾಸಿನ ನೆರವನ್ನು ಸರ್ಕಾರದಿಂದ ಕೊಡಿಸುವುದು , ಕೋಮು ಸೌಹಾರ್ದತೆ ನೋಡಿಕೊಳ್ಳುವುದು , ಅಂತಹ ವಾತವರಣಕ್ಕೆ ಶ್ರಮಿಸುವುದು,
ಜನರ ರಕ್ಷಣೆ ಮುತ್ತು ಸುವ್ಯವಸ್ಥೆಗೆ ಹೆಚ್ಚುವರಿ ಪೋಲಿಸ್ ಸ್ಟೇಷನ್ ,ಟ್ರಾಫಿಕ್ ಸಿಗ್ನಲ್ ಒದಗಿಸುವ ಮತ್ತು ಸೌಂದರ್ಯಾಲಂಕರ ಗೊಳಿವಯವ ಕಾರ್ಯ ಗಳು ಇತ್ಯಾದಿ...
ಗ್ರಾಮಪಂಚಾಯಿತಿಯಲ್ಲಿ ಸುಗಮ ಆಡಳಿತ , ಅವರ ಅವಶ್ಯಕತೆ ,ತೊಂದರೆ ಇತ್ಯಾದಿಗಳ ಬಗ್ಗೆ ಚರ್ಚಿಸಿ ಸಮಸ್ಯೆ ತಾಲ್ಲೂಕು ,ಜಿಲ್ಲಾ, ರಾಜ್ಯ ಮಟ್ಟ ದಲ್ಲಿ ಚರ್ಚಿಸಿ ಪರಿಹರಾದ ದಾರಿ ಹುಡುಕುವುದು ಇತ್ಯಾದಿ..ಫಲಾನುಭವಿಗಳ ಪಾರದರ್ಶಕ ಆಯ್ಕೆ ,
ಕ್ಷೇತ್ರದಲ್ಲಿ ಸುವ್ಯವಸ್ಥಿತ ಆಡಳಿತಕ್ಕೆ ದುಡಿಯುವುದು.
ಕೇಂದ್ರಸರ್ಕಾರದ ಯೋಜನೆಗಳು ಕ್ಷೇತ್ರದ ಪರಿಸರ, ಕಾಡು, ಪಟ್ಟಣ,ನಗರ ಹಾಳುಮಾಡುವಂತಿದ್ದರೆ ಅದನ್ನು ರಾಜ್ಯಸರ್ಕಾರದ ಮೂಲಕ ಕೇಂದ್ರದ ಗಮನ ಸೆಳೆಯುವುದು ಇತ್ಯಾದಿ.
ರಾಜ್ಯದಲ್ಲಿ ರಾಜ್ಯ ಸರ್ಕಾರ ಹೊರಡಿಸುವ ಶಾಸಕರ ಕ್ಷೇತ್ರದ ಒಟ್ಟಾರೆ ಆಡಳಿತ ಶ್ರೇಣಿಯಲ್ಲಿ ನಿಮ್ಮ ಕ್ಷೇತ್ರದ
ಶ್ರೇಣಿ ಎಷ್ಟರಲ್ಲಿ ಇದೆ ...
ನಿಮ್ಮ ಕ್ಷೇತ್ರದಲ್ಲಿ ಆದರ್ಶ ಗ್ರಾಮಗಳು ಎಷ್ಟಿವೆ?
ಆಸ್ತಿ ಪಾಸ್ತಿ ನುಂಗಿರುವ ಸರ್ಕಾರ,ಇಲಾಖೆ ಇತ್ಯಾದಿಯವರಿಂದ ನೊಂದವರೆಷ್ಟಿದ್ದಾರೆ?
ಕಳ್ಳತನ ಮಾಡುವ ಗ್ಯಾಂಗ್ ಎಷ್ಟಿವೆ?
ಇಸ್ಪೀಟು ಜೂಜು ಆಡುವ ಅಡ್ಡೆಗಳೆಷ್ಟಿವೆ?
ನಕಲಿ ಮದ್ಯದ ಹಾವಳಿಯಿಂದ ಮನೆ ಹಾಳಾದವೆಷ್ಟು? ಸತ್ತವೆಷ್ಟು?
ನಿರುದ್ಯೋಗ ಎಷ್ಟಿದೆ?
ಪೋಲಿಸ್ ಠಾಣೆಯಲ್ಲಿ ಹೊಡೆದಾಟದ ಪ್ರಕರಣಗಳೆಷ್ಟು?
ಕಾಡು,ಗೋಮಾಳ, ನದಿ ನುಂಗಿದ ಪ್ರಮಾಣವೆಷ್ಟು?
ಇತ್ಯಾದಿ ಇತ್ಯಾದಿ ವಿಚಾರಗಳು
ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಶಾಸಕರು
ಎಷ್ಟು ಕೆಲಸ ಮಾಡಿದ್ದಾರೆ ಎಂದು ತಿಳಿವುದು....
ಖಾಸಗಿ ದೇವಸ್ಥಾನ, ಖಾಸಗಿ ಶಾಲೆಗಳು, ಖಾಸಗಿ ಮಠ,ಮಂದಿರ,ಮಸೀದಿ,ಇತ್ಯಾದಿ ಧಾರ್ಮಿಕ ಕ್ಷೇತ್ರಗಳು ಶಾಸಕರ ಕ್ಷೇತ್ರದಲ್ಲಿ ಇದ್ದರೂ ಶಾಸಕರಿಗೆ ನೇರವಾಗಿ ಸಂಬಂಧಿಸಿದವಲ್ಲ... ಆದರೆ
ಅವರಿಂದ ಸಾರ್ವಜನಿಕರಿಗೆ ತೊಂದರೆ ಆದರೆ ಆಗ ಕಾನೂನು ಇಲಾಖೆ ತನ್ನ ಕೆಲಸ ಮಾಡದಾಗ ಅದನ್ನು ಪ್ರಶ್ನಿಸುವ ಕಾನೂನು ರೀತಿ ಸರಿಪಡಿಸುವ ಕೆಲಸ ಅವರದಾಗಿರುತ್ತದೆ.
ಯಾವ ರೈತ ಏನು ಬೆಳೆಯಬೇಕು ಎಂದು ಸಲಹೆ ನೀಡುವುದು ಕೃಷಿ ಇಲಾಖೆ,
ಮಣ್ಣು ಪರೀಕ್ಷೆ ಇತ್ಯಾದಿ ಕೃಷಿ ಚಟುವಟಿಕೆಗೆ ಸಂಬಂಧ ಪಟ್ಟ ಇಲಾಖೆ ಸಲಹೆ ನೀಡುತ್ತದೆ ಶಾಸಕರಲ್ಲ....
#ಪರವಾನಿಗೆ
ಮಂಡಲ ಪಂಚಾಯಿತಿ,ಪಟ್ಟಣ ಪಂಚಾಯಿತಿ, ನಗರ ಸಭೆ, ಇತ್ಯಾದಿ ನೀಡುತ್ತವೆ ಶಾಸಕರಲ್ಲ...
#ಮಾಶಾಸನ
ಗ್ರಾಮ ಪಂಚಾಯಿತಿ ಗುರುತಿಸಿದ ಫಲಾನುಭವಿಗಳಿಗೆ ರಾಜ್ಯಸರ್ಕಾರ ನೀಡುತ್ತದೆ ,ಶಾಸಕರಲ್ಲ...
#ಬೆಳೆನಷ್ಟ ಇತ್ಯಾದಿ
ಗ್ರಾಮ ಪಂಚಾಯತಿ ಗುರುತಿಸಿದ ಫಲಾನುಭವಿಗಳಿಗೆ ರಾಜ್ಯಸರ್ಕಾರ ನೀಡುತ್ತದೆ, ಶಾಸಕರಲ್ಲ...
#ಫಲಾನುಭವಿಗಳ ಗುರುತಿಸುವಾಗ ಆಗುವ ರಾಜಕೀಯವನ್ನು #ಜನತೆ ಪತ್ತೆ ಹಚ್ಚಿ ಅನ್ಯಾಯ ಆಗಿದ್ದರೆ ಸರಿಪಡಿಸಿಕೊಳ್ಳಬೇಕು...
ನಿಮ್ಮ ಕ್ಷೇತ್ರದ ಶಾಸಕರು ಹೇಗೆ ಕೆಲಸ ಮಾಡಿದ್ದಾರೆ, ಅವರದಲ್ಲದ ಯಾವುದಕ್ಕೆ ಪ್ರಚಾರ ಪಡಕೊಂಡಿದ್ದಾರೆ, ಶಾಸಕರಲ್ಲದ ಬೇರೆಯವರು ಸರ್ಕಾರದ ಯೋಜನೆಯ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ!
ಪಗಾರ ಪಡೆಯುವ ಅತಿರಥ ಸರ್ಕಾರಿ ನೌಕರರು ತಮ್ಮ ನಿಯಮ ಬಧ್ದ ಕೆಲಸಕ್ಕೆ ಶಾಸಕರಲ್ಲದಿದ್ದರೂ ಮೂಗು ತೂರಿಸಲು ಯಾಕೆ ಬಿಟ್ಟಿ ದ್ದಾರೆ, ತಾವು ಶಾಸಕರಲ್ಲದವರಿಂದ ಹೇಳಿಸಿಕೊಂಡು ಕೆಲಸ ಮಾಡುವ ಅಯೋಗ್ಯರಿದ್ದಾರೆಯೇ?
ಕೆಂದ್ರ ದಿಂದ ಕ್ಷೇತ್ರಕ್ಕೆ ಬರುವ ಯೋಜನೆಗಳ ಅನುಷ್ಠಾನ ಶಾಸಕರ ಮೇಲಿರುತ್ತದೆ...
ತುಂಬಿದ ನದಿ,ನೀರಿನ ಚಾನಲ್ ನಲ್ಲಿ ಈಜುವುದು, ಗುಡ್ಡ ಹತ್ತುವುದು,ಬೈಕ್ ಓಡಿಸುವುದು ಬೈಕ್ ರ್ಯಾಲಿಯಲ್ಲಿ ಓಡಿಸುವುದು,ಟ್ಯಾಕ್ಟರ್ ,ಲಾರಿ, ಹೊಸ ಕಾರ ತಗೊಳ್ಳೊದು, ಕುದುರೆ ಓಡಿಸುವುದು,
ಪಲ್ಲಕ್ಕಿ ಹೋರೋದು, ಕಾಲಿಗೆ ಬೀಳೋದು, ಮದುವೆ ,ಶವಸಂಸ್ಕಾರಕ್ಕೆ ಹೋಗೋದು,ವಿದೇಶ ಯಾತ್ರೆ ಮಾಡೋದು,ನೂರಾರು ಆಕಳ ಎಮ್ಮೆ ಇತ್ಯಾದಿ ಸಾಕೋದು, ಬಡವರಿಗೆ ದುಡ್ಡು ಹಂಚೋದು , ಶಾಲೆ ಇತ್ಯಾದಿ ಉಧ್ದಾಟನೆ, ಶೋರೂಂ,ಅಂಗಡಿ ಉದ್ಘಾಟನೆ ,ಬೋಟ್,ಎಲಿಕ್ಯಾಫ್ಟರ್ ಓಡಿಸೋದು, ಕ್ರಿಕೆಟ್, ಫುಟ್ ಬಾಲ್ ಕ್ರೀಡೆ ನೋಡಲು ಸ್ಟೇಡಿಯಂಗೆ ಹೋಗೋದು, ಸಿನಿಮಾ ಮಾಡೋದು,
ಸಿನಿಮಾದಲ್ಲಿ ನಟಿಸೋದು, ಟೀವಿಯಲ್ಲಿ ಬರೋದು,ಪೂಜೆ ಮಾಡೋದು, ಯೋಗ ಮಾಡೋದು, ಎಕ್ಸ್ಪ್ರೆಸ್ ಮಾಡೋದು , ಡ್ಯಾನ್ಸ್ ಮಾಡೋದು ,ಹಾಡು ನಾಟಕ ಮಾಡೋದು ...ಈತರಹದ ಇತ್ಯಾದಿ ಕೆಲಸಗಳು ಶಾಸಕರ ವಯಕ್ತಿಕ ಅಭಿರುಚಿ ಹವ್ಯಾಸಗಳಾಗಿರುತ್ತವೆ...ಇವ್ಯಾವು ಕ್ಷೇತ್ರದ #ಶಾಸರಕರು ಕ್ಷೇತ್ರದಲ್ಲಿ ಶಾಸಕರಾಗಿ ಕಾನೂನು ಹೇಳುದಂತೆ ಮಾಡಬೇಕಾಗಿರುವ ಕೆಲಸಗಳಿಗೆ ಸಂಬಂಧಿಸಿವುಗಳಲ್ಲ...ಇವುಗಳ ಪ್ರಚಾರ
ಕ್ಷೇತ್ರಕ್ಕೆ ಸಂಬಂಧಿಸಿದಲ್ಲ.
ಯಾರೇ ಸಾಮನ್ಯರು ಇಂತಹ ವಯಕ್ತಿಕ ಅಭಿರುಚಿ ಇಟ್ಟುಕೊಂಡಿರುತ್ತಾರೆ...ಅವುಗಳಿಗೆ ಕ್ಷೇತ್ರದ ಶಾಸಕರ ತರಹ ಪ್ರಚಾರ ಪಡೆಯುವುದಿಲ್ಲ ಇದನ್ನು ಗಮನಿಸಿ...!
ಯಾರದೇ ಮನೆಗೆ ಹೋದರೂ ಅತಿಥಿ ಸತ್ಕಾರ ಮಾಡುತ್ತಾರೆ...ಪ್ರಚಾರ ಪಡೆಯುವುದಿಲ್ಲ....
ಮತದಾರರು ಅಂದರೆ ಓಟು ಕೊಡುವವರು ಕ್ಷೇತ್ರದವರು ಶಾಸಕರ ಮನೆಗೆ ಹೋದರೆ ತಿಂಡಿ ಚಹಾ ಕೊಡುತ್ತಾರೆ, ಆದರೆ ಅದೇ ಶಾಸಕರು ತಿಂಡಿ ಚಹಾ ಕೊಟ್ಟದ್ದಕ್ಕೂ ಪ್ರಚಾರ ಪಡೆಯುತ್ತಾರೆ...ಇತ್ಯಾದಿ ಅನಾವಶ್ಯಕ ಪ್ರಚಾರದಿಂದ ದೂರವಿದ್ದು ಶಾಸಕರ ಮಾಡಬೇಕಾದ ಕೆಲಸಗಳು ಹೇಗೆ ನೆಡೆದಿವೆ ಎಂದು ತಿಳಿದುಕೊಂಡು ಶಾಸಕರ ಪ್ರಾಮಾಣಿಕತೆ ಅರಿಯಿರಿ...
ಅವರ ಹುಟ್ಟು ಹಬ್ಬ, ಅವರ ಮನೆಮಂದಿಯ ಹುಟ್ಟುಹಬ್ಬ, ವಾರ್ಷಿಕೋತ್ಸವ ಇತ್ಯಾದಿ ಅವರ ಖಾಸಗಿ ಕಾರ್ಮಕ್ರಮ... ಶಾಸಕರಲ್ಲದ ಶ್ರೀಮಂತರು ಮಾಡುತ್ತಾರೆ ಉಡುಗರೆ ನೀಡುತ್ತಾರೆ..
ಆದರೆ ಶಾಸಕರು ಅದನ್ನ ಮತದಾರರ ಓಟು ಪಡೆಯಲು ಪ್ರಚಾರ ಮಾಡುತ್ತಾರೆ...
ನಿಮಗೆ ಒಳ್ಳೆಯ ಆಡಳಿತ ಬೇಕಿದ್ದಲ್ಲಿ ಇಂತಹುಗಳು ಶಾಸಕರ ಆಯ್ಕೆ ಮಾಡಲು ಪೂರಕವಲ್ಲ ಎಂದು ತಿಳಿಯಬೇಕು...
#ಶಾಸಕರು