Geologist for borewells

Geologist for borewells Advanced borewell point location through satellite images for agriculture, industrial and drinking water. Drilling monitoring support through WhatsApp.

24/08/2025

ನಾನು ಮಾಡುವ ಪಾಯಿಂಟಗಳಲ್ಲಿ ಬರುವ ನೀರು" Confined aquifer” ನಲ್ಲಿಯೆ ಇರುತ್ತದೆ. ಇದನ್ನು “ನಿಯಂತ್ರಿತ ಜಲಧಾರ” ಅಥವಾ “ಆವರಿತ ಜಲಧಾರ” ಎಂದು ಹೇಳಬಹುದು. ನಿಯಂತ್ರಿತ ಜಲಧಾರದಲ್ಲಿ (confined aquifer) ನೀರು ಭೂಮಿಯಡಿಯಲ್ಲಿ ಎರಡು ಅಜೀರ್ಯ ಶಿಲೆಗಳ (impermeable layers) ನಡುವೆ ಸಿಲುಕಿಕೊಂಡಿರುತ್ತದೆ. ಈ ಜಲಧಾರದಲ್ಲಿನ ಒತ್ತಡದಿಂದ, ಬೋರು ಕೊರೆದಾಗ ನೀರು ಕನಿಷ್ಟ 200 feet ಮೇಲಕ್ಕೆ ತಳ್ಳಲ್ಪಡುತ್ತದೆ. ಇದರಿಂದ ರೈತರಿಗೆ ಬೋರು ಮೋಟರ್ ಆಳವಾಗಿ ಇಳಿಸುವ ಪ್ರಮೇಯ ಬರುವದಿಲ್ಲ. ಈ ತರಹದ ಜಲ ಮಳೆ ಕೆರೆ ಇತರ ಮೇಲ್ಮೈ ನೀರಿನ ಮೇಲೆ ಅವಲಂಬಿತವಾಗಿರುವದಿಲ್ಲ. ಉಧಾಹರಣೆಗೆ ೨ -೩ ವರುಷ ಮಳೆ ಬರದಿದ್ದರೂ ಕೂಡ ಇಂತಹ ಬೋರುಗಳು ಓಡುತ್ತಲೇ ಇರುತ್ತವೆ. ನಿನ್ನೆ ರಾತ್ರಿ ಕೊರಟಗೆರೆ ತಾಲೂಕಿನ ಮಾದಾವರ ಗ್ರಾಮದಲ್ಲಿ ಬೋರು ಕೊರೆದು ಯಶಸ್ವಿ ಆದ ಚಂದ್ರಕುಮಾರ್ ಹಾಗೂ ಬೆಂಗಳೂರಿನ ಕೋಗಿಲು ಗ್ರಾಮದಲ್ಲಿ ಯಶಸ್ವಿ ಆದ ವರ್ಷ ಅವರಿಗೂ ಅಭಿನಂದನೆಗಳು.

25/01/2025

ಇತಿಹಾಸದುದ್ದಕ್ಕೂ ಮತ್ತು ಪ್ರಪಂಚದಾದ್ಯಂತ, ಅಂತರ್ಜಲವು ಮಾನವ ಜೀವನವನ್ನು ಉಳಿಸಿಕೊಳ್ಳಲು ನೀರಿನ ಪ್ರಮುಖ ಮೂಲವಾಗಿದೆ. ಕಳೆದ ಶತಮಾನದಲ್ಲಿ ಈ ಸಂಪನ್ಮೂಲದ ಬಳಕೆಯು ತುಂಬಾ ಹೆಚ್ಚಾಗಿದೆ. ಪ್ರಪಂಚದ ಅನೇಕ ಪ್ರದೇಶಗಳಲ್ಲಿ, ಮಾನವ ಮತ್ತು ಪರಿಸರ ವ್ಯವಸ್ಥೆಯ ಅಗತ್ಯಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಕಷ್ಟ. ಅಂತರ್ಜಲ ಸಮಸ್ಯೆಯ ಅಂತರಾಷ್ಟ್ರೀಯ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಮಾಪನಗಳು ಮತ್ತು ಅನುಗುಣವಾದ ಪ್ರಮಾಣದಲ್ಲಿ ವಿಶ್ಲೇಷಣೆ ಅಗತ್ಯವಿದೆ. ರಿಮೋಟ್ ಸೆನ್ಸಿಂಗ್‌ನಲ್ಲಿನ ಪ್ರಗತಿಗಳು ನೀರಿನ ಸವಕಳಿಯ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಹಳೆಯ ಸಾಂಪ್ರದಾಯಿಕ ಮಾಪನ ವಿಧಾನಗಳಿಗಿಂತ ಉತ್ತಮವಾಗಿವೆ

ಮುಂದಿನ ದಶಕದಲ್ಲಿ ನಾಲ್ಕು ಪ್ರಮುಖ ಅಂತರ್ಜಲ ಸಮಸ್ಯೆಗಳೆಂದರೆ ನೀರಿನ ಸವಕಳಿ, ನೀರಿನ ಗುಣಮಟ್ಟದ ಅವನತಿ, ನೀರು-ಶಕ್ತಿಯ ಸಂಬಂಧ ಮತ್ತು ಗಡಿ ದಾಟಿದ ನೀರಿನ ಸಂಘರ್ಷಗಳು.

ನನಗೆ ಇರುವ ಅನುಭವದಲ್ಲಿ ರಾಜ್ಯದ ಬೆಂಗಳೂರು ಪೂರ್ವ ತಾಲೂಕು ಅಂತರ್ಜಲ ಕ್ಶಾಮವನ್ನು ಎದುರಿಸುತ್ತಿದೆ. ಬೋರವಲ್ಲುಗಳ ಆಳ 2200 ಅಡಿಗಿಂತ ( > 600 ಮೀಟರ್ಸ) ಹೆಚ್ಚಾಗುತ್ತಿದೆ. ಇದು ಅಪಾಯದ ಸಂಕೇತ.

ಬೋರ್ ಕೊರೆದ ಸ್ಥಳ : ಸೊನ್ನನಾಯಕನಹಳ್ಲಿ
ದಿನಾಂಕ: 24 January 2025
ಆಳ : 680 ಅಡಿ
ಜಿಯಾಲಜಿಸ್ಟ ಅನಿಲ್
Mobile no 9845178740

04/09/2021

ಇದು ನನ್ನ ಬೋರವೆಲ್. ೬ ತಿಂಗಳ ಹೀಗೆ ಉಕ್ಕುತ್ತದೆ. ತಾವೆಲ್ಲರೂ ಇಂಗು ಗುಂಡಿ ಮಾಡಿ

28/03/2021

ಓಂ ಮಹಾಪ್ರಾಣ ದೀಪಂ...ಶಿವಂ ಶಿವಂ
ಮಹೋಂಕಾರ ರೂಪಂ ಶಿವಂ ಶಿವಂ

ಮಹಾಪ್ರಾಣದೀಪಂ ಶಿವಂ ಶಿವಂ
ಭಜೇ ಮಂಜುನಾಥಮ್. ಶಿವಂ

ದೇವರಿಗೆ ನಮಿಸುತ್ತ ಹಾಗೂ ಆ ದೇವರ ಕೃಪೆಯಿಂದ ನಿನ್ನೆ ರಾತ್ರಿ ಚೆನ್ನಪಟ್ಟಣ ತಾಲೂಕಿನ ಸೀಬನಹಳ್ಳಿ ಗ್ರಾಮದ ಗಣೇಶ್ ಅವರು ಒಳ್ಳೆಯ ನೀರು ಪಡೆದಿದ್ದಾರೆ. ಅವರಿಗೆ ಅಭಿನಂದನೆಗಳು. ಗಣೇಶ್ ಅವರ ಇಚ್ಚೆಗಳೆಲ್ಲ ಇಡೇರಲಿ ಹಾಗೂ ತಮ್ಮೆಲ್ಲರ ಸಂಕಷ್ಟಗಳು ದೂರವಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳೊಣ.🙏🙏🙏

ಜಿಯಾಲಜಿಸ್ಟ್ ಅನಿಲ್. 9845178740
ಬೋರ್ ಕೊರೆದ ಸ್ಥಳ: ಸೀಬನಹಳ್ಳಿ
ಲ್ಯಾಂಡ್ ಪಾರ್ಮ: ಹಿಲ್ ಟಾಪ್ ವೆದರ್ಡ.
ದಿನಾಂಕ: ೦೨.೦೩.೨೦೨೧

22/02/2021

ಪ್ರಮುಖ ನಂಬಿಕೆಯ ಪ್ರಕಾರ ಪರಶಿವನೊಂದಿಗೆ ಒಂದು ಕೋಟಿ ದೇವಾನುದೇವತೆಗಳು ಭಾರತದ ಪವಿತ್ರ ನಗರಗಳಲ್ಲಿ ಒಂದಾದ ಕಾಶಿಗೆ ಪ್ರಯಾಣಿಸುತ್ತಿದ್ದರು. ಹೀಗೆ ಸಾಗುತ್ತಿದ್ದ ದೇವತೆಗಳು ಒಂದು ರಾತ್ರಿ ಉನಕೋಟಿಯಲ್ಲಿ ತಂಗಲು ನಿರ್ಧರಿಸಿದ್ದರು. ಆದರೆ, ಈ ದೇವತೆಗಳೆಲ್ಲಾ ನಿದ್ದೆಗೆ ಜಾರುವ ಮುನ್ನ, ಸೂರ್ಯೋದಕ್ಕೂ ಮೊದಲು ಎಲ್ಲರೂ ಎದ್ದು ಮುಂದಿನ ಪ್ರಯಾಣಕ್ಕೆ ಅಣಿಯಾಗಬೇಕು ಎಂದು ಪರಮೇಶ್ವರನ ಕಟ್ಟಪ್ಪಣೆಯಾಗಿತ್ತು. ಆದರೆ, ಮರುದಿನ ಬೆಳಗ್ಗೆ ಈಶ್ವರ ಮಾತ್ರ ಎದ್ದಿದ್ದು, ಬಾಕಿ ದೇವತೆಗಳಲ್ಲಾ ನಿದ್ದೆಯಲ್ಲೇ ಇದ್ದರು. ಹೀಗಾಗಿ, ತನ್ನೊಂದಿಗಿದ್ದ ದೇವತೆಗಳಿಗೆ ಕಲ್ಲಾಗುವಂತೆ ಶಾಪ ಕೊಟ್ಟು ಶಿವ ತನ್ನ ಪ್ರಯಾಣವನ್ನು ಮುಂದುವರಿಸಿದರೆ, ಇತ್ತ, ಕಲ್ಲಾಗಿ ಉಳಿದ ದೇವತೆಗಳು ಇನ್ನೂ ಅಲ್ಲೇ ಇದ್ದಾರೆ ಎಂಬುದು ಜನರ ನಂಬಿಕೆ.

ದೇವರಹಟ್ಟಿ ಗುಬ್ಬಿ ತಾಲೂಕಿನ ಚಿಕ್ಕ ಗ್ರಾಮ. ಎಲ್ಲೇ ನೋಡಿದರೂ ಕರಿಕಲ್ಲುಗಳಮಯ. ಈ ಕರಿಕಲ್ಲುಗಳ ಗುಣ ಮತ್ತು ಅವು ನೀಡುವ ನೀರು ನನಗೆ ಖುಷಿ.

ಹಿಂದಿನವಾರ ISRO ದಲ್ಲಿ ಕೆಲಸಮಾಡುವ ಶಶಿಕುಮಾರ್ ಯಾದವ್ ಅವರಿಗೆ ಪಾಯಿಂಟ ಮಾಡಿಕೊಟ್ಟು ಬಂದಿದ್ದೆ. ೧೦೬೦ ಅಡಿಯಲ್ಲಿ ಒಳ್ಳೆಯ ನೀರು ಪಡೆದ ಅವರಿಗೆ ಅಭಿನಂದನೆಗಳು

ಜಿಯಾಲಜಿಸ್ಟ್ ಅನಿಲ್: 9845178740

12/10/2020

12.545750,77.879568. இந்த இடம் தமிழ்நாட்டின் தென்கினிகோட்டை தாலுகாவின் கெல்லமங்கள கிராமத்திற்கு அருகில் அமைந்துள்ளது.
ரவி அங்கு ஒரு ரியல் எஸ்டேட் அதிபர். அதே பகுதியில் ஒரு சிறிய நிலத்தை தாங்க பல முயற்சிகள் மேற்கொள்ளப்பட்டுள்ளன. தண்ணீருக்காக அவர்கள் கண்ட பழம் குறுகிய காலம். எல்லா முயற்சிகளுக்கும் பிறகு, கடைசியாக ஒரு புவியியலாளராக வெளியே வந்தார். எனக்கு கிடைத்துவிட்டது.
அவர்களின் நிலத்திற்கு அருகில் இருந்து ஆற்றங்கரையில் உள்ள கரியை சுட்டிக்காட்டுங்கள். கிணற்று நீர் வந்துவிட்டது. நல்ல.
இந்த நதி திசை திருப்புதல் எனக்கு ஒரு கேள்வி. புவியியலாளர் அனில் 9845178740

10/10/2020

ಹೊಡಿ ಮಗ, ಹೊಡಿ ಮಗ, ಹೊಡಿ ಮಗ....ಬಿಡಬೇಡ ಇಷ್ಟಕ್ಕೇ.

ಬೋರ್ ಹೊಡೆಯುವಾಗ ಡೈಲಾಗಗಳನ್ನ ಕೇಳಬೇಕು. ಸಂಭಂದಿಕರು, ಸಂಭಂದ ಇಲ್ಲದವರು ಎಲ್ಲರೂ ಸಲಹೇಗಾರರೇ. ನೀರು ಬರದಾಗ ಅಥವಾ ಬಂದಾಗ.

ಆದರೆ ನೀರು ಎಲ್ಲರ ಕೋಪವನ್ನು ತಣಿಸುವ ನೈಸರ್ಗಿಕ ಸಂಪತ್ತು. Water is universal solvent. ಎಲ್ಲರ ಕೂತೂಹಲ ನೀರಿಗೆ ಯಾಕೆ ಇಷ್ಟು ಶಕ್ತಿ ಅಂತ ಅನಿಸುವದು ಸಹಜ. ಅದಕ್ಕೆ ಇದನ್ನ Polar solvent ಅಂತ ಕರೀತಾರೆ ಮತ್ತು ಇದು ಎಲ್ಲರ ಕೈಗೆ ಎಟಕುವದು. ನೀರಿಗೆ ಯಾವುದೇ ಜಾತಿ ಧರ್ಮವಿಲ್ಲ. ತಾಯಿ ಸಿಟ್ಟಾದ ಮಗುವಿನ ಮುಖಕ್ಕೆ ಹಾಕುವದೂ ಕೂಡ ನೀರನ್ನೆ. ಲಾಠಿ ಏಟು ಫಲಕಾರಿ ಆಗದಿದ್ದಾಗ ಉದ್ರಿಕ್ತ ಗುಂಪನ್ನು ಚದುರಿಸಲು ಪೋಲಿಸರು ಉಪಯೋಗ ಮಾಡುವದು ನೀರನ್ನೇ😀

ಶುದ್ದ ನೀರಿನ ಮಿತವಾದ ಬಳಕೆ ಮಾನವನ ಆಸ್ತಿ. ದಯವಿಟ್ಟು ನೀರನ್ನು ಮತ್ತು ನೀರಿನ ಮೂಲಗಳನ್ನು ಹಾಳುಮಾಡಿಕೊಳ್ಳಬೇಡಿ.

ಬೋರ್ ಕೊರೆದ ಸ್ಥಳ: ಹಂದನಕೆರೆ
ಆಳ: 500 ಆಡಿಗಳು
ತಾಲೂಕು: ಚಿಕ್ಕನಾಯಕನಹಳ್ಳಿ.
ಲ್ಯಾಂಡಪಾರ್ಮ್: ವ್ಯಾಲಿ ಫಿಲ್ ಶ್ಯಾಲೋ

ಜಿಯಾಲಜಿಸ್ಟ ಅನಿಲ್ 9845178740

15/09/2020

ಕೈಕೊಡೋದಕ್ಕೂ ಒಂದು ಲಿಮಿಟ್ ಬೇಡ್ವ? ಸಮಯಕ್ಕೆ ಸರಿಯಾಗಿ ಬರದೇ ಇರೋದು ಎಲ್ಲಾ ಕೈಕೋಡದೇ ।।

ಕೆಲಸಗಾರರು, ನೌಕರರು, ತಜ್ನರು ಹೀಗೆ ...ಎಲ್ವರೂ ನಮಗೆ ಕೈಕೊಡುತ್ತಲೇ ಇರುತ್ತಾರೆ.

ಹಾಗಾಗಿ ೫ ಇಂಚು ನೀರು ಸಿಕ್ಕಿದ್ಗು ಕೈಕೊಡಲ್ಲಾ ಅಂತ ಗ್ಯಾರಂಟಿ ಏನು? ಯಾವದೂ ಶಾಶ್ವತ ಅಲ್ಲಾ ಅನ್ನೊದು ನನ್ನ ನಂಬಿಕೆ. ಅಷ್ಟೇ!!! ಆದರೆ ನಾವು ಯಾವೂದೇ ಒಳ್ಳೆಯ ಕೆಲಸಕ್ಕೆ ಕೈ ಹಾಕುವಾಗ ನಂಬಿಕೆ ಜೊತೆ ತಂತ್ರಜ್ನಾನ ಬಳಸಿಕೊಂಡರೆ ಯಶಸ್ಸು ಅಧಿಕ. ದೇವರು ಎಲ್ಲಾ ಕಡೆ ಇದ್ದಾನೆ. ಆ ನಂಬಿಕೆ ವಯಕ್ತಿಕ. ಪ್ರತಿನಿತ್ಯ ವಾಟ್ಸಪ್ ಪೇಸಬುಕ್ ಗಳ ಹೀರೋಗಳು ಪುಕ್ಕಟೆ ಸಲಹೆ ಕೊಡುವವರಿಗೂ ತಂತ್ರಜ್ನಾನದ ಅರಿವು ಇರಲ್ವಾ?. ಬೋರ್ ಪಾಯಿಂಟ್ ವಿಷಯಕ್ಕೆ ಬಂದರೇ ತಂತ್ರಜ್ನಾನ ನಂಬಬೇಡಿ ಅಂತ ಹೇಳುವವರನ್ನು ಹೇಗೆ ನಂಬುವದು??

ಇಂದು ಬೆಳಿಗ್ಗೆ ಡ್ರೈವರ್ ಕೈಕೊಟ್ಚಾಗ ನಾನೇ 300 ಕಿಮಿ ಡ್ರೈವ್ ಮಾಡಿಕೊಂಡು ಅತಿ ಕಡಿಮೆ ಮಳೆ ಬೀಳುವ ಅನಂತಪುರ ಜಿಲ್ಲೆಯ ಪಾಲಸಮುದ್ರಂ ಮಂಡಲದ ಒಂದು ಹಳ್ಳಿಗೆ ಹೋಗಿ 20 ಎಕರೆ ಜಾಗದಲ್ಲಿ ಹತ್ತು ಬೋರ್ ಪೇಲ್ ಆಗಿದ್ರೂ ನನ್ನ ಜಿಯಾಲಜಿ ಓದಿನ ಅನುಭವದ ಮೇಲೆ ಪಾಯಿಂಟ್ ಮಾಡಿ ಬಂದು ಮನೆ ತಲುಪುವದರ ಒಳಗೆ ಬಂದ ಪಲಿತಾಂಶ.

ಬೋರಿನ ಆಳ: 210 ಆಡಿಗಳು
ಭೂಪ್ರದೇಶ: ಕರಿಕಲ್ಲಿನ ಪಕ್ಕ
ಸ್ಥಳ: ಪಾಲಸಮುದ್ರಮ್ ಹತ್ತಿರದ ಹಳ್ಳಿ

ಜಿಯಾಲಜಿಸ್ಟ ಅನಿಲ್ 9845178740

Address

67 I Main Nagarbavi
Bangalore
560072

Opening Hours

Monday 6am - 7pm
Tuesday 6am - 7pm
Wednesday 6am - 7pm
Thursday 6am - 7pm
Friday 6am - 7pm
Saturday 6am - 7pm
Sunday 6am - 7pm

Telephone

9845178740

Alerts

Be the first to know and let us send you an email when Geologist for borewells posts news and promotions. Your email address will not be used for any other purpose, and you can unsubscribe at any time.

Contact The Business

Send a message to Geologist for borewells:

Share