Karnataka State Souharda Federal Cooperative Ltd

Karnataka State Souharda Federal Cooperative Ltd Contact information, map and directions, contact form, opening hours, services, ratings, photos, videos and announcements from Karnataka State Souharda Federal Cooperative Ltd, Business service, Nirman Bhavan, Drive Rajkumar Road, 1st Block, Rajaji Nagar, Bangalore.

10/10/2024
Karnataka State Rural Development and Panchayat Raj University Gadag and Karnataka State Souharda Federal Cooperative Lt...
01/10/2024

Karnataka State Rural Development and Panchayat Raj University Gadag and Karnataka State Souharda Federal Cooperative Ltd., Kssfcl Bengaluru

2nd batch Diploma in Cooperation and Banking Management (DCBM) 1st semester examination in 05 centres of Karnataka

The Diploma in cooperation and banking management course started by Karnataka State Rural Development and Panchayat Raj University Gadag and Karnataka State Souharda Federal Cooperative Ltd., Bengaluru conducted Diploma in cooperation and banking management course 1st semester examinations on 28th and 29th September 2024. In the 1st semester the paper were Cooperative Environment and Banking Management, Cooperative Credit Structure, Cooperative Laws and Digital Banking Operations. Total of 266 students attended the course exam.
Diploma in cooperation and banking management course designed specially for the employees of cooperatives and youths. This Diploma in cooperation and banking management course certificate is valid throughout the India to join any cooperative services.

ದಿನಾಂಕ 28.05.2024ರಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ರಾಜ್ಯದ ಸೌಹಾರ್ದ ಸಹಕಾರಿಗಳ ನಿರ್ದೆಶಕರುಗಳಿಗಾಗಿ ಎರಡು ದಿನಗಳ...
28/05/2024

ದಿನಾಂಕ 28.05.2024ರಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ರಾಜ್ಯದ ಸೌಹಾರ್ದ ಸಹಕಾರಿಗಳ ನಿರ್ದೆಶಕರುಗಳಿಗಾಗಿ ಎರಡು ದಿನಗಳ ಆಡಳಿತ ಪರಿಣಿತಿ ಮತ್ತು ವ್ಯವಹಾರ ಅಭಿವೃದ್ಧಿ ತರಬೇತಿಯನ್ನು ಸೌಹಾರ್ದ ಸಹಕಾರಿ ಸೌಧ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ ಇಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಯಾಪ್ಟನ್ ಡಾ. ರಾಜೇಂದ್ರ ಕೆ.ಭಾ.ಆ.ಸೇ, ಮಾನ್ಯ ಸಹಕಾರ ಸಂಘಗಳ ನಿಬಂಧಕರು, ಸಹಕಾರ ಇಲಾಖೆ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರಾದ ಜಿ ನಂಜನಗೌಡ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಗನ ಕೆ. ಮಾನ್ಯ ಉಪನಿಬಂಧಕರು ಹಾಗೂ ಪೀಠಾಧಿಕಾರಿಗಳು ದಾವಾ ಪಂಚಾಯಿತಿ ನ್ಯಾಯಾಲಯ (ನಿ.441) ಬೆಂಗಳೂರು, ಹಾಗೂ ಶ್ರೀ ಶಶಿಧರ ಮಾನ್ಯ ಸಹಕಾರ ಸಂಘಗಳ ಉಪ ನಿಬಂಧಕರು ಬೆಂಗಳೂರು, ಇವರು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೆಶಕರಾದ ಶರಣಗೌಡ ಜಿ ಪಾಟೀಲ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಯುಕ್ತ ಸಹಕಾರಿಯ ಮಾಜಿ ನಿರ್ದೆಶಕರಾದ ಶ್ರೀ ವೈ ಟಿ ಪಾಟೀಲ ಹಾಗೂ ಎಲ್ ಎಸ್ ಆನಂದ್ ಇವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಸಂಯುಕ್ತ ಸಹಕಾರಿಯ ಸಿಬ್ಬಂದಿಯಾದ ಶ್ರೀಮತಿ ವಿಜಶ್ರೀ ಇವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕ್ಯಾಪ್ಟನ್ ಡಾ. ರಾಜೇಂದ್ರ ಕೆ.ಭಾ.ಆ.ಸೇ, ಮಾನ್ಯ ಸಹಕಾರ ಸಂಘಗಳ ನಿಬಂಧಕರು, ಸಹಕಾರ ಇಲಾಖೆ ಇವರಿಗೆ ಸಂಯುಕ್ತ ಸಹಕಾರಿಯ ವತಿಯಿಂದ ಸನ್ಮಾನಿಸಲಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ 75 ಸೌಹಾರ್ದ ಸಹಕರಿಗಳಿಂದ 122 ಪ್ರತಿನಿಧಿಗಳು ಭಾಗವಹಿಸಿರುತ್ತಾರೆ.

ದಿನಾಂಕ 27.04.2024  ಮತ್ತು 28.04.2024 ರಂದು ಸಂಯುಕ್ತ ಸಹಕಾರಿಯ ಸಿಬ್ಬಂದಿಗಳಿಗೆ ಆಯೋಜಿಸಲಾಗಿರುವ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ...
29/04/2024

ದಿನಾಂಕ 27.04.2024 ಮತ್ತು 28.04.2024 ರಂದು ಸಂಯುಕ್ತ ಸಹಕಾರಿಯ ಸಿಬ್ಬಂದಿಗಳಿಗೆ ಆಯೋಜಿಸಲಾಗಿರುವ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರಾದ ಶ್ರೀ ಜಿ.ನಂಜನಗೌಡ ಸಿ ಎ ಇವರು ನೆರವೇರಿಸಿದರು. ತರಬೇತಿಯ ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀ ಬಿ ಎಸ್ ಗುಂಡುರಾವ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಯುಕ್ತ ಸಹಕಾರಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಬಿ ಹೆಚ್ ಕೃಷ್ಣಾ ರೆಡ್ಡಿ ರವರು ವಹಿಸಿದ್ದರು. ತರಬೇತಿಯಲ್ಲಿ ಸಂಯುಕ್ತ ಸಹಕಾರಿಯ 100 ಸಿಬ್ಬಂದಿಗಳಲ್ಲಿ 94 ಸಿಬ್ಬಂದಿಗಳು ಭಾಗವಹಿರುತ್ತಾರೆ.

08/04/2024
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದಿನಾಂಕ 22.03.2024 ಶುಕ...
23/03/2024

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದಿನಾಂಕ 22.03.2024 ಶುಕ್ರವಾರ "ಸೌಹಾರ್ದ ಸಹಕಾರಿ ಸೌಧ" ತರಬೇತಿ ಸಭಾಂಗಣದಲ್ಲಿ ನೆರವೇರಿಸಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಅರುಣ ಮುರಳಿಧರ್ , ಮಾನ್ಯ ಸ್ತ್ರೀ ರೋಗ ತಜ್ಞರು ಬೆಂಗಳೂರು ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಿ ನಂಜನ ಗೌಡ ಮಾನ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಗನ ಕೆ ಮಾನ್ಯ ಸಹಕಾರಿಗಳ ಉಪನಿಬಂಧಕರು ಹಾಗೂ ಪೀಠಾಧಿಕಾರಿಗಳು ಸೌಹಾರ್ದ ಸಹಕಾರಿಗಳ ದಾವಾ ಪಂಚಾಯತಿ ನ್ಯಾಯಾಲಯ ಬೆಂಗಳೂರು, ಶ್ರೀ ಬಿ ಎಸ್ ಗುಂಡೂರಾವ ಮಾನ್ಯ ನಿರ್ದೇಶಕರು ಸಂಯುಕ್ತ ಸಹಕಾರಿ ಬೆಂಗಳೂರು ಶ್ರೀಮತಿ ಭಾರತಿ ಜಿ. ಭಟ್ ಮಾನ್ಯ ನಿರ್ದೇಶಕರು ಸಂಯುಕ್ತ ಸಹಕಾರಿ ಬೆಂಗಳೂರು ಶ್ರೀಮತಿ ಶೈಲಜಾ ತಪಲಿ ಮಾನ್ಯ ನಿರ್ದೇಶಕರು ಸಂಯುಕ್ತ ಸಹಕಾರಿ ಬೆಂಗಳೂರು ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರು ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಒಟ್ಟಾರೆ 100 ಜನ ಮಹಿಳೆಯರು ಭಾಗವಹಿಸಿದ್ದರು.

ದಿನಾಂಕ 18.01.2024 ರಂದು ಸಂಯುಕ್ತ ಸಹಕಾರಿಯ ವತಿಯಿಂದ ಮಾನ್ಯ ಸಹಕಾರ ಸಚಿವರಾದ ಶ್ರೀ ಕೆ ಎನ್ ರಾಜಣ್ಣ ಇವರನ್ನು ಭೇಟಿ ಮಾಡಿ ಸೌಹಾರ್ದ ಸಹಕಾರಿ ಕ...
19/01/2024

ದಿನಾಂಕ 18.01.2024 ರಂದು ಸಂಯುಕ್ತ ಸಹಕಾರಿಯ ವತಿಯಿಂದ ಮಾನ್ಯ ಸಹಕಾರ ಸಚಿವರಾದ ಶ್ರೀ ಕೆ ಎನ್ ರಾಜಣ್ಣ ಇವರನ್ನು ಭೇಟಿ ಮಾಡಿ ಸೌಹಾರ್ದ ಸಹಕಾರಿ ಕಾಯ್ದೆ ಮತ್ತು ಚಳುವಳಿ ಬಗ್ಗೆ ಚರ್ಚಿಸಲಾಯಿತು, ಇದೇ ಸಂದರ್ಭದಲ್ಲಿ ನೂತನ ವರ್ಷದ ಶುಭಾಶಯಗಳನ್ನು ಕೋರಿ ಸನ್ಮಾನಿಸಲಾಯಿತು ಮತ್ತು ಸಂಯುಕ್ತ ಸಹಕಾರಿಯ ನೂತನ ವರ್ಷದ ಡೈರಿ, ಕ್ಯಾಲೆಂಡರ್ ಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಅಧ್ಯಕ್ಷರಾದ ಶ್ರೀ ನಂಜನಗೌಡ ಜಿ, ಮಾನ್ಯ ನಿರ್ದೇಶಕರಾದ ಶ್ರೀ, ಬಿ ಎಚ್ ಕೃಷ್ಣಾರೆಡ್ಡಿ, ಶ್ರೀ ಗುರುನಾಥ ಜಾಂತಿಕಾರ್, ಶ್ರೀ ಗುಂಡೂರಾವ್, ಶ್ರೀ ವಿಜಯ್ ಭಾಗವಹಿಸಿದ್ದರು ಹಾಗೂ ಮಾನ್ಯ ನಿಬಂಧಕರಾದ ಕ್ಯಾಪ್ಟನ್ ರಾಜೇಂದ್ರ, ಒ.ಎಸ್.ಡಿ ಶ್ರೀ ದೀವಾಕರ್ ಸೇರಿದಂತೆ ಅಪರ ನಿಬಂಧಕರು, ಜಂಟಿ ನಿಬಂಧಕರು, ಉಪ ನಿಬಂಧಕರು, ಸಹಾಯಕ ನಿಬಂಧಕರು ಉಪಸ್ಥಿತರಿದ್ದರು. ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

Address

Nirman Bhavan, Drive Rajkumar Road, 1st Block, Rajaji Nagar
Bangalore
560010

Website

Alerts

Be the first to know and let us send you an email when Karnataka State Souharda Federal Cooperative Ltd posts news and promotions. Your email address will not be used for any other purpose, and you can unsubscribe at any time.

Share