NRLM Chamarajnagara

NRLM Chamarajnagara Contact information, map and directions, contact form, opening hours, services, ratings, photos, videos and announcements from NRLM Chamarajnagara, Business consultant, Chamarajanagar.

04/05/2026
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯಲ್ಲಿ  ಸ್ವ-ಸಹಾಯ ಸಂಘದ ಮಹಿಳೆಯರೆ  ನಿರ್ವಹಿಸುವಂತಹ ಅಕ್ಕ ಕೆಫೆಯನ...
04/05/2026

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರೆ ನಿರ್ವಹಿಸುವಂತಹ ಅಕ್ಕ ಕೆಫೆಯನ್ನು ಮಾನ್ಯ ಸಂಸದರಾದ ಶ್ರೀ ಸುನಿಲ್ ಬೋಸ್ ರವರು ಮತ್ತು ಮಾನ್ಯ ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ರವರು ಉದ್ಘಾಟಿಸಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಗ್ರಾಮೀಣ ಪ್ರದೇಶಗಳಲ್ಲಿ ಬಡ ಕುಟುಂಬದ ಮಹಿಳೆಯರನ್ನು ಸ್ವ-ಸಹಾಯ ಗುಂಪುಗಳಡಿ ಸಂಘಟಿಸುವ ಮೂಲಕ ಅವರು ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತ ಅವಕಾಶಗಳನ್ನು ಕಲ್ಪಿಸಿ, ಆರ್ಥಿಕವಾಗಿ ಸ್ವಾವಲಂಭಿಯಾಗಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ನಿರಂತರ ಬೆಂಬಲ ನೀಡಲಾಗುತ್ತಿದೆ
ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆಯನ್ನು ಒದಗಿಸುವುದಾಗಿರುತ್ತದೆ. ಪುಮುಖವಾಗಿ ಈ ಅಕ್ಕ ಕೆಫೆ ಚಟುವಟಿಕೆಯಡಿ ಉತ್ತಮ ಗುಣಮಟ್ಟದ ಶುಚಿ-ರುಚಿ ಪೌಷ್ಟಿಕ ಆಹಾರವನ್ನು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಪೂರೈಸುವ ದೂರದೃಷ್ಟಿಯೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ, ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮೋನಾ ರೋತ್ IAS ರವರು, ಉಪಕಾರ್ಯದರ್ಶಿ ಹಾಗೂ NRLM ನೊಡೆಲ್ ಅಧಿಕಾರಿಗಳಾದ ಶೃತಿ ರವರು, ಕಾಡಾ ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು, ಕೆಡಿಪಿ ಸದಸ್ಯರು, ಜನಪ್ರತಿನಿಧಿಗಳು ಮಾನ್ಯ ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು RWS ಕಾರ್ಯಪಾಲಕ ಅಭಿಯಂತರರು ಎನ್ ಆರ್ ಎಲ್ ಎಂ ಗಳು, ಸ್ವಸಹಾಯ ಗುಂಪಿನ ಮಹಿಳೆಯರು ಗ್ರಾಮಸ್ಥರು ಮತ್ತು ಗ್ರಾಪಂ ಸಿಬ್ಬಂದಿಗಳು ಹಾಜರಿದ್ದರು.

Address

Chamarajanagar

Telephone

9632179450

Website

Alerts

Be the first to know and let us send you an email when NRLM Chamarajnagara posts news and promotions. Your email address will not be used for any other purpose, and you can unsubscribe at any time.

Shortcuts

Share