ganeshkumar_h_gani

ganeshkumar_h_gani I am Business Man..

28/05/2026

ಸ್ವಾತಂತ್ಯ ವೀರ ಸಾವರ್ಕರ್ ಜಯಂತಿ 🙏🏻❣️

ಆ ಸಿಂಧು-ಸಿಂಧು ಪರ್ಯಂತ ಯಸ್ಯ ಭಾರತ-ಭೂಮಿಕಾ |ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದೂರಿತಿ ಸ್ಮೃತಃ ||ಸಾಹಸ ಹಾಗೂ ಧೈರ್ಯಕ್ಕೆ ಮತ್ತೊಂದು ಹೆಸರೇ ...
28/05/2026

ಆ ಸಿಂಧು-ಸಿಂಧು ಪರ್ಯಂತ ಯಸ್ಯ ಭಾರತ-ಭೂಮಿಕಾ |
ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದೂರಿತಿ ಸ್ಮೃತಃ ||

ಸಾಹಸ ಹಾಗೂ ಧೈರ್ಯಕ್ಕೆ ಮತ್ತೊಂದು ಹೆಸರೇ ವಿನಾಯಕ ದಾಮೋದರ ಸಾವರ್ಕರ್. ಸ್ವಾತಂತ್ರ್ಯ ವೀರನ ಜನ್ಮದಿನದ ಶುಭಾಶಯಗಳು.🙏🏻🚩

#ಮಹಾರಕ್ಷಕ್ #ಯುವಾಬ್ರಿಗೇಡ್
YB2026

20/04/2026

ದುಡಿದು ತಿನ್ನಲು ಆಜ್ಞಾಪಿಸಿದ,
ಶಿವಪೂಜೆಯ ಮಾಡಲು ಪ್ರೇರೇಪಿಸಿದ,
ಅಧ್ಯಾತ್ಮ ತತ್ವಗಳನ್ನು ವಚನಗಳ ಮೂಲಕ ಸಾರಿದ,
ಭಾರತದ ಶ್ರೇಷ್ಠ ತತ್ವಜ್ಞಾನಿ,
ಬಸವಣ್ಣನವರಿಗೆ ಅವರ ಜನ್ಮದಿನದಂದು ಶತ ಶತ ನಮನಗಳು.

ತಮ್ಮೆಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.


#ಬಸವಣ್ಣ
#ಯುವಾಬ್ರಿಗೇಡ್
#ಅಮೃತಕುಂಭ

"ಗುರು ತನ್ನೊಡಲೊಳು ವಶವಾದ ಸೂತ್ರವನುನಸುನಗುತಲಿ ತೆಗೆದಲ್ಲಿಯೆ ತೊಡಿಸಿದಉಸುರಿದ ಮಂತ್ರವ ಹೊಸಬನ ಮೂಡುತ..."ಸಂತ ಶಿಶುನಾಳ ಶರೀಫರು ಅಂದು ಹಾಡಿದ ಈ...
11/02/2026

"ಗುರು ತನ್ನೊಡಲೊಳು ವಶವಾದ ಸೂತ್ರವನು
ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ
ಉಸುರಿದ ಮಂತ್ರವ ಹೊಸಬನ ಮೂಡುತ..."

ಸಂತ ಶಿಶುನಾಳ ಶರೀಫರು ಅಂದು ಹಾಡಿದ ಈ ಸಾಲುಗಳ ನಿಜವಾದ ಅರ್ಥ ಇಂದು ನನ್ನ ಅನುಭವಕ್ಕೆ ಬಂತು. ಯುವಾಬ್ರಿಗೇಡ್‌ನ 43 ಸಹೋದರರೊಂದಿಗೆ ನಾನು ಇಂದು ಶ್ರೀ ರಾಮಕೃಷ್ಣ ಮಠದ ಪರಮಪೂಜ್ಯ ಅಧ್ಯಕ್ಷರಾದ "ಶ್ರೀಮದ್ ಸ್ವಾಮಿ ಗೌತಮಾನಂದಜೀ ಮಹಾರಾಜ್" ಅವರಿಂದ 'ಮಂತ್ರ ದೀಕ್ಷೆ'ಯನ್ನು ಸ್ವೀಕರಿಸಿದೆವು.

ಗುರುಗಳು ನಮ್ಮಲ್ಲಿ ಮಂತ್ರವನ್ನು ಉಪದೇಶಿಸುತ್ತಿದ್ದಾಗ, ಶರೀಫರು ಹೇಳಿದಂತೆ ನಮ್ಮೊಳಗಿದ್ದ ಹಳೆಯ ಅಹಂಕಾರದ 'ನಾನು' ಮರೆಯಾಗಿ, ಹೊಸದೊಂದು ಆಧ್ಯಾತ್ಮಿಕ ವ್ಯಕ್ತಿತ್ವದ ಹುಟ್ಟು ಆದಂತಾಯಿತು. ಗುರು ತನ್ನಲ್ಲಿ ವಶವಾಗಿದ್ದ ಆ ಜ್ಞಾನದ ಸೂತ್ರವನ್ನು ನಗುನಗುತ ನಮಗೆ ತೊಡಿಸಿದಾಗ, ನಮ್ಮ ಬದುಕು ಪಾವನವಾಯಿತು. 'ಮಂತ್ರ ದೀಕ್ಷೆ'ಯನ್ನು ಪಡೆದು ಅಧಿಕೃತವಾಗಿ ಶ್ರೀ ರಾಮಕೃಷ್ಣರ ಮಹಾನ್ ಪರಂಪರೆಯನ್ನು ಸೇರಿಕೊಂಡೆವು.

ಈ ಮಹತ್ತರವಾದ ಆಧ್ಯಾತ್ಮಿಕ ಸೌಭಾಗ್ಯವನ್ನು ನಮಗೆ ಕರುಣಿಸಿದ ಗುರುವರ್ಯರಿಗೆ ಹಾಗೂ ಈ ದಿವ್ಯ ಅವಕಾಶಕ್ಕೆ ಸಾಕ್ಷಿಯಾದ ಯುವಾಬ್ರಿಗೇಡ್‌ಗೆ ನಾವು ಸದಾ ಚಿರಋಣಿಗಳು.

- ಗಣೇಶ್ ಕುಮಾರ್. ಹೆಚ್
#ಜೈಗುರುದೇವ #ಆಧ್ಯಾತ್ಮಿಕಯಾತ್ರೆ #ಕೋಲ್ಕತ್ತಾ
#ರಾಮಕೃಷ್ಣಮಠ #ವಿವೇಕಾನಂದ #ಯುವಾಬ್ರಿಗೇಡ್

ಯುವಾಬ್ರಿಗೇಡ್‌ನ ನೂರು ಮಂದಿ ಸಹೋದರರ ತಂಡವಾಗಿ ನಾವು ಇಂದು ಶ್ರೀ ರಾಮಕೃಷ್ಣ ಪರಮಹಂಸರ ಲೀಲಾ ಭೂಮಿಗೆ ಆಗಮಿಸಿದ್ದು, ಮುಂದಿನ ಆರು ದಿನಗಳ ಕಾಲ ಈ ಪ...
09/02/2026

ಯುವಾಬ್ರಿಗೇಡ್‌ನ ನೂರು ಮಂದಿ ಸಹೋದರರ ತಂಡವಾಗಿ ನಾವು ಇಂದು ಶ್ರೀ ರಾಮಕೃಷ್ಣ ಪರಮಹಂಸರ ಲೀಲಾ ಭೂಮಿಗೆ ಆಗಮಿಸಿದ್ದು, ಮುಂದಿನ ಆರು ದಿನಗಳ ಕಾಲ ಈ ಪವಿತ್ರ ನೆಲದ ದಿವ್ಯತೆಯನ್ನು ಅನುಭವಿಸಲಿದ್ದೇವೆ. ಮೊದಲ ದಿನವೇ ಬೇಲೂರಿನ ರಾಮಕೃಷ್ಣ ಮಠದ ಆವರಣ ಪ್ರವೇಶಿಸುತ್ತಿದ್ದಂತೆ ಮನಸ್ಸಿನಲ್ಲಿ ಒಂದು ರೀತಿಯ ಅವ್ಯಕ್ತ ಶಾಂತಿ ಮನೆಮಾಡಿತು.

ಶ್ರೀ ರಾಮಕೃಷ್ಣರ ಭವ್ಯ ಮಂದಿರದಲ್ಲಿ ದರ್ಶನ ಪಡೆದ ನಂತರ, ನಮಗೆ ದೊರೆತ ಅತ್ಯಂತ ದೊಡ್ಡ ಸೌಭಾಗ್ಯವೆಂದರೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಶ್ರೀ ಗೌತಮಾನಂದ ಜೀ ಮಹಾರಾಜ್ ಅವರ ದರ್ಶನ ಮತ್ತು ಆಶೀರ್ವಾದ. ಅವರ ಸನ್ನಿಧಿಯಲ್ಲಿ ಕಳೆದ ಆ ಕ್ಷಣಗಳು ನಮ್ಮ ಯಾತ್ರೆಗೆ ಹೊಸ ಚೈತನ್ಯ ನೀಡಿದವು. ತದನಂತರ ಜಗನ್ಮಾತೆ ಶ್ರೀ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಮಂದಿರಗಳಿಗೆ ಭೇಟಿ ನೀಡಿದಾಗ, ಅಲ್ಲಿನ ದಿವ್ಯ ಕಂಪನಗಳು ನಮ್ಮನ್ನು ಮಂತ್ರಮುಗ್ಧಗೊಳಿಸಿದವು.

ಪ್ರಯಾಣದ ಆಯಾಸದ ನಡುವೆ ಆಶ್ರಮದವರು ನೀಡಿದ ರುಚಿಕರವಾದ ದಕ್ಷಿಣ ಭಾರತದ ಶೈಲಿಯ ಊಟ ಹೊಟ್ಟೆಗೂ ಮನಸ್ಸಿಗೂ ತೃಪ್ತಿ ನೀಡಿತು.

ಸಂಜೆ ರಾಮಕೃಷ್ಣ ಮಂದಿರದಲ್ಲಿ ನಡೆದ ಭಕ್ತಿಪೂರ್ಣ ಆರತಿಯ ದರ್ಶನದಿಂದ ಇಡೀ ದಿನದ ಪಯಣ ಸಾರ್ಥಕವೆನಿಸಿತು. ದಿನದ ಅಂತ್ಯದಲ್ಲಿ ಆಶ್ರಮದ ಹಿಂಭಾಗದಲ್ಲಿ ಮೌನವಾಗಿ ಹರಿಯುವ ಗಂಗೆಯ ತೀರದಲ್ಲಿ ಕುಳಿತು, ಆ ತಂಪಾದ ಗಾಳಿಯನ್ನು ಆಸ್ವಾದಿಸುತ್ತಾ ಈ ಅದ್ಭುತ ಆಧ್ಯಾತ್ಮಿಕ ಯಾತ್ರೆಯ ಸುಂದರ ಆರಂಭವನ್ನು ಸಂಭ್ರಮಿಸಿದೆವು.

#ಯುವಾಬ್ರಿಗೇಡ್ #ರಾಮಕೃಷ್ಣಮಠ #ಬೇಲೂರುಮಠ #ಆಧ್ಯಾತ್ಮಿಕಯಾತ್ರೆ #ವಿವೇಕಾನಂದ #ಕೋಲ್ಕತ್ತಾ

ಸಂಘ ಶತಾಬ್ದಿ ಮಾತೆಯ ಸೇವೆಗೆ 100ರ ಸಂಭ್ರಮ! 1925ರ ವಿಜಯದಶಮಿಯಂದು ಆರಂಭವಾದ   ನೂರು ವರ್ಷಗಳ ಸೇವಾ ಪಯಣವನ್ನು ಪೂರೈಸಿದೆ.ರಾಷ್ಟ್ರಹಿತ, ಶಿಸ್ತು...
11/10/2025

ಸಂಘ ಶತಾಬ್ದಿ ಮಾತೆಯ ಸೇವೆಗೆ 100ರ ಸಂಭ್ರಮ!

1925ರ ವಿಜಯದಶಮಿಯಂದು ಆರಂಭವಾದ ನೂರು ವರ್ಷಗಳ ಸೇವಾ ಪಯಣವನ್ನು ಪೂರೈಸಿದೆ.
ರಾಷ್ಟ್ರಹಿತ, ಶಿಸ್ತು, ತ್ಯಾಗ ಮತ್ತು ಸಮರ್ಪಣೆಯ ಈ ಶತಮಾನ ಪ್ರಯಾಣವು ಭಾರತೀಯ ಸಮಾಜದ ದಿಕ್ಕನ್ನೇ ಬದಲಾಯಿಸಿದ ಐತಿಹಾಸಿಕ ಅಧ್ಯಾಯ!

ದಾವಣಗೆರೆ ನಗರದಲ್ಲಿ ನಡೆದ ರಾಷ್ಟೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಪತಸಂಚಾಲದಲ್ಲಿ ಪಾಲ್ಗೊಂಡ ಸಂದರ್ಭ.


#ಸಂಘಶತಾಬ್ದಿ

ಆತ್ಮೀಯರೇ, ಯುವಾ ಬ್ರಿಗೇಡ್ ನ  #ವಿವೇಕಮಾಲೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ನಿಮ್ಮ ಜಿಲ್ಲೆಯ ಪ್ರಮುಖರನ್ನು ಸಂಪರ್ಕಿಸಿ. ವಿವೇಕಮಾಲೆ...
20/12/2023

ಆತ್ಮೀಯರೇ,

ಯುವಾ ಬ್ರಿಗೇಡ್ ನ #ವಿವೇಕಮಾಲೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ನಿಮ್ಮ ಜಿಲ್ಲೆಯ ಪ್ರಮುಖರನ್ನು ಸಂಪರ್ಕಿಸಿ. ವಿವೇಕಮಾಲೆ ಅಭಿಯಾನದ ಬಗ್ಗೆ ಪೂರ್ಣ ವಿವರ ಇದೆ. ಓದಿಕೊಳ್ಳಿ.

ವಿವೇಕಮಾಲೆ ಅಭಿಯಾನ ಏನು? ಎತ್ತ? ಪೂರ್ಣ ವಿವರ :

ಯುವಾ ಬ್ರಿಗೇಡ್ ವಿವೇಕಾನಂದರ ಕನಸಿನ ತರುಣರ ನಿರ್ಮಾಣಕ್ಕಾಗಿ ಡಿಸಂಬರ್ 25 ರ ರಾಕ್ ಡೇ ಯಿಂದ ಜನವರಿ 12 ರ ವಿವೇಕಾನಂದರ ಜಯಂತಿಯವರೆಗೂ 18 ದಿನಗಳ ಕಾಲ ವಿವೇಕಮಾಲೆ ಅಭಿಯಾನವನ್ನು ಆರಂಭಿಸಲಿದೆ. ವಿವೇಕಾನಂದರ ಆಸೆಯಂತೆ ನಮ್ಮ ದೇಶದ ಯುವಕರು ಬಲಿಷ್ಠ ದೇಹ ಸದೃಢ ಮನಸ್ಸು ಮಿಂಚಿನಂತಾ ಬುದ್ಧಿ ಶಕ್ತಿಯನ್ನು ಹೊಂದಿದಾಗ ಮಾತ್ರ ಶ್ರೇಷ್ಠ ಕಾರ್ಯಗಳನ್ನು ಸಾಧಿಸಲು ಸಾಧ್ಯ ಅಂತಹ ತರುಣರು ನಮಗೆ ಬೇಕಾಗಿದೆ ಎಂದು ನುಡಿದಿದ್ದರು. ಇದರ ಮೊದಲ ಭಾಗವಾದ ಬಲಿಷ್ಠ ದೇಹದ ತಯಾರಿಗಾಗಿ ಯುವಕರು ಪ್ರಯತ್ನಿಸಲೆಂಬುದೇ ಈ ವಿವೇಕಮಾಲೆ ಅಭಿಯಾನದ ಉದ್ದೇಶ.

ಭಾಗವಹಿಸಲು ಇಚ್ಚಿಸುವ ಯುವಕರು ಮಾಡಬೇಕಾದುದೇನು?
ಮೊದಲು ನಿಮ್ಮ ಜಿಲ್ಲೆಯ ಜಿಲ್ಲಾ ಸಂಚಾಲಕರನ್ನು ಸಂಪರ್ಕಿಸಿ ಅವರನ್ನು ಭೇಟಿಯಾಗಿ ಅವರು ಕೊಡುವ ವಿವೇಕಾನಂದರ ಚಿಕ್ಕ ಪೆಂಡೆಂಟ್ ಅನ್ನು ಪಡೆದು ಹೆಸರು ವಾಟ್ಸಾಪ್ ಮೊಬೈಲ್ ನಂಬರನ್ನು ನೋಂದಾಯಿಸತಕ್ಕದ್ದು. ಅದಾದ ನಂತರ ವಿವೇಕಮಾಲೆ ಗ್ರೂಪ್ ಗೆ ಅವರು ನಿಮ್ಮನ್ನು ಸೇರಿಸುತ್ತಾರೆ. ಅವರು ಕೊಟ್ಟ ಪೆಂಡೆಂಟ್ ಅನ್ನು ರಾಕ್ ಡೇ ದಿನದಂದು ಯಾವುದಾದರೂ ದೇವಸ್ಥಾನ, ನದಿ ತೀರ, ದೇವರ ಮನೆ ಅಥವಾ ಯಾವುದೇ ಶ್ರದ್ಧಾಕೇಂದ್ರದಲ್ಲಿ ತುಳಸಿ, ರುದ್ರಾಕ್ಷಿ, ಸ್ಫಟಿಕ ಅಥವಾ ಯಾವುದೇ ಪವಿತ್ರ ದಾರವಾದರೂ ಸರಿ ಅದಕ್ಕೆ ಅಳವಡಿಸಿಕೊಂಡು ಕೊರಳಲ್ಲಿ ಧರಿಸುವುದು. ವಿವೇಕ ಮಾಲೆ ವಾಟ್ಸಾಪ್ ಗ್ರೂಪ್ ನಲ್ಲಿ ಅಡ್ಮಿನ್ ಗಳು ಪ್ರತಿದಿನ ನೀವು ಮಾಡಬೇಕಾದ ವ್ಯಾಯಾಮದ ವಿವರಗಳನ್ನು ಚಿತ್ರಸಮೇತ ಹಾಕುತ್ತಾರೆ. ಅದರಂತೆ ಬೆಳಗ್ಗೆ ಬೇಗ ಎದ್ದು ವ್ಯಾಯಾಮಗಳನ್ನು ಮಾಡುತ್ತಾ ಅದರಲ್ಲಿ ಬರುವ ಸೂಚನೆಗಳನ್ನು ಅನುಸರಿಸುವುದು. ಪ್ರತಿ ದಿನ ವ್ಯಾಯಾಮದ ಸಂಖ್ಯೆ ಹೆಚ್ಚಾಗುತ್ತಿರುತ್ತದೆ. ಜನವರಿ 12 ರ ವೇಳೆಗೆ ನೀವು ಇದನ್ನು ಸರಿಯಾಗಿ ಅನುಸರಿಸಿ ಅನುಷ್ಠಾನಕ್ಕೆ ತಂದಿದ್ದಲ್ಲಿ ಒಬ್ಬ ಸಮರ್ಥವಾದ ತರುಣ ಮಾಡಬಹುದಾದಷ್ಟು ವ್ಯಾಯಾಮಕ್ಕೆ ನಿಮ್ಮ ದೇಹ ಸಿದ್ಧವಾಗಿರುತ್ತದೆ. ಜನವರಿ 20, 21 ರಂದು ಯುವಾ ಬ್ರಿಗೇಡ್ ನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರೊಂದಿಗೆ ಸಾಮೂಹಿಕವಾಗಿ ಕನ್ಯಾಕುಮಾರಿಗೆ ತೆರಳಿ ಸಮುದ್ರ ಮಧ್ಯದಲ್ಲಿರುವ ಸ್ವಾಮಿ ವಿವೇಕಾನಂದ ಬಂಡೆಯಲ್ಲಿನ ಮಂದಿರದಲ್ಲಿ ಮಾಲೆಯನ್ನು ವಿಸರ್ಜಿಸುವುದು, ಕನ್ಯಾಕುಮಾರಿ ಗೆ ಬರಲು ಆಗದಿದ್ದವರೂ ನಿಮ್ಮ ಊರುಗಳ ಯಾವುದಾದರೂ ದೇವಸ್ಥಾನದಲ್ಲಿ ವಿಸರ್ಜಿಸಬಹುದು. ಜೊತೆಗೆ ವ್ಯಾಯಾಮದ ಆಚರಣೆ ಅನುಷ್ಠಾನವಿಲ್ಲದೇ ದಯಮಾಡಿ ಕೇವಲ ಪ್ರವಾಸದ ಕಾರಣಕ್ಕಾಗಿ ಈ ಕಾರ್ಯಕ್ರಮವಿಲ್ಲ ಎಂಬುದನ್ನು ಭಾಗವಹಿಸುವವರು ಅರ್ಥಮಾಡಿಕೊಳ್ಳಬೇಕು ಎಂದೂ ವಿನಮ್ರಪೂರ್ವಕವಾಗಿ ಕೋರಿಕೊಳ್ಳುತ್ತೇವೆ.

ವಿವೇಕ ಮಾಲೆ ಧರಿಸುವವರು ಡಿ.23 ರ ಒಳಗೆ ದಾವಣಗೆರೆ ಜಿಲ್ಲೆಯವರು ಕೆಳಗಿನ ನಂಬರ್ ಗೆ ವಾಟ್ಸಾಪ್ ಅಥವಾ ಕಾಲ್ ಮಾಡಿ ತಿಳಿಸಬೇಕು
ಗಣೇಶ್ : 7349689869
ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಧನ್ಯವಾದಗಳು..


#ರಾಕ್‌ಡೇ
#ಯುವ_ಯೋಗ

ಸಾವರ್ಕರ್ ರವರ ಪತ್ರ 🔥🙏🏻🚩
25/08/2022

ಸಾವರ್ಕರ್ ರವರ ಪತ್ರ 🔥🙏🏻🚩

ಶ್ರೀಲಕ್ಷ್ಮೀನಾರಾಯಣೀ ಗೋಲ್ಡನ್ ಟೆಂಪಲ್ 🙏🏻🙏🏻🙏🏻  #ಶ್ರೀಪುರಂ ,  #ವೆಲ್ಲೂರು   #ತಮಿಳುನಾಡು  🚩❤️ #ಜೈ_ಹಿಂದೂ_ರಾಷ್ಟ್ರ 🚩🚩🚩
28/05/2022

ಶ್ರೀಲಕ್ಷ್ಮೀನಾರಾಯಣೀ ಗೋಲ್ಡನ್ ಟೆಂಪಲ್ 🙏🏻🙏🏻🙏🏻
#ಶ್ರೀಪುರಂ , #ವೆಲ್ಲೂರು #ತಮಿಳುನಾಡು 🚩❤️
#ಜೈ_ಹಿಂದೂ_ರಾಷ್ಟ್ರ 🚩🚩🚩

"ಸಂಪೂರ್ಣ ಜಗತ್ತನ್ನು ಗೆಲ್ಲಬಹುದು ಸಂಸ್ಕಾರವೊಂದಿದ್ದರೆ ,ಗೆದ್ದ ಜಗತ್ತನ್ನು ಕಳೆದು ಕೊಳ್ಳಬಹುದು ಅಹಂಕಾರವೊಂದಿದ್ದರೆ !"  🙂ಜೈ ಶ್ರೀ ಕೃಷ್ಣ 🚩ಜ...
18/03/2022

"ಸಂಪೂರ್ಣ ಜಗತ್ತನ್ನು ಗೆಲ್ಲಬಹುದು ಸಂಸ್ಕಾರವೊಂದಿದ್ದರೆ ,
ಗೆದ್ದ ಜಗತ್ತನ್ನು ಕಳೆದು ಕೊಳ್ಳಬಹುದು ಅಹಂಕಾರವೊಂದಿದ್ದರೆ !" 🙂
ಜೈ ಶ್ರೀ ಕೃಷ್ಣ 🚩
ಜೈ ಹಿಂದೂ ರಾಷ್ಟ್ರ 🚩

Address

Davangere
577001

Website

Alerts

Be the first to know and let us send you an email when ganeshkumar_h_gani posts news and promotions. Your email address will not be used for any other purpose, and you can unsubscribe at any time.

Share