27/05/2026
2011 ರಲ್ಲಿ ಅನಂತ್ ಕುಮಾರ್, ಈಶ್ವರಪ್ಪ , ಬಿ ಎಲ್ ಸಂತೋಷ್, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ವಿರೋಧಿ ಬಣದ ನಾಯಕರು ಅಶೋಕ ಹೊಟೆಲಿನಲ್ಲಿ ಕುಳಿತು ಬಿ ಎಸ್ ಯಡಿಯೂರಪ್ಪನವರ ರಾಜಿನಾಮೆಗೆ ಒತ್ತಾಯಿಸಿದ್ದರು. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ ಅಡ್ವಾಣಿಯ ಅಣತಿ ಮೇರೆಗೆ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಬೆಂಗಳೂರಿಗೆ ದೌಡಾಯಿಸಿದ್ದರು, ಅವತ್ತಿಗಿನ್ನೂ ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪನವರನ್ನ ತೋಡಿಕೊಳ್ಳುವ ಧೈರ್ಯವಿರಲಿಲ್ಲ!
ವಿರೋಧಿ ಬಣದ ನಾಯಕತ್ವ ವಹಿಸಿದ್ದ ಅನಂತ್ ಕುಮಾರ್ ತೆರೆಮರೆಯಲ್ಲಿ ಮುಖ್ಯಮಂತ್ರಿಯಾಗಲು ಹವಣಿಸಿದ್ದರು, ಅವಕಾಶ ಸಿಕ್ಕರೆ ನಾನು ಒಂದು ಕೈ ನೋಡೋಣ ಎಂಬಂತಿದ್ದರು ಈಶ್ವರಪ್ಪ, ಇಬ್ಬರ ಜಗಳ ಮೂರನೆಯವನಿಗೆ ಲಾಭವೆಂಬಂತೆ ಜಗದೀಶ್ ಶೆಟ್ಟರ್ ಹೆಸರು ಮುನ್ನೆಲೆಗೆ ಬಂದಿತ್ತು!
ವಿರೋಧಿ ಬಣದ ಮೂವರು ಮುಖ್ಯಮಂತ್ರಿ ಅಭ್ಯರ್ಥಿಗಳು ಯಡಿಯೂರಪ್ಪನವರ ರಾಜಿನಾಮೆಗೆ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದರು, ರಾಜಿನಾಮೆ ಸಲ್ಲಿಸಿ ರಾಜಭವನದಿಂದ ಹೊರಬಂದ ಬಿ ಎಸ್ ಯಡಿಯೂರಪ್ಪನವರು ಯಾರ ಮೂಲಾಜಿಲ್ಲದೆ ಮಾಧ್ಯಮಗಳ ಮುಂದೆ ಸದಾನಂದಗೌಡ ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿ ಬಿಟ್ಟರು! ಇದು ಯಡಿಯೂರಪ್ಪನವರ ತಾಕತ್ತು !! ಅವತ್ತು ಯಡಿಯೂರಪ್ಪನವರ ನಿರ್ಧಾರಕ್ಕೆ ಹೈಕಮಾಂಡ್ ಕಿಮಿಕ್ ಅನ್ನಲಿಲ್ಲ!!
ಇದು ಸಾಲದು ಎಂಬಂತೆ ಸೀದ ಅಶೋಕ ಹೊಟೆಲಿಗೆ ಸದಾನಂದ ಗೌಡರ ಜೊತೆ ತೆರಳಿ ವಿರೋಧಿ ಬಣಕ್ಕೆ ನೇರ ಎಚ್ಚರಿಕೆ ಕೊಟ್ಟು ಬಂದದ್ದಿರು, ಯಡಿಯೂರಪ್ಪನವರ ಆ ಪರಿ ರೌದ್ರಾವತಾರ ಕಂಡು ಅನಂತಕುಮಾರ್, ನಿತಿನ್ ಗಡ್ಕರಿ ರಾಜನಾಥ್ ಸಿಂಗ್ ಹಾದಿಯಾಗಿ ಎಲ್ಲರೂ ಗರಬಡಿದವರಂತಾಗಿದ್ದರು, ಇದನ್ನ ಕರ್ನಾಟಕದ ರಾಜಕಾರಣ ಮರೆಯುವುದುಂಟೆ???
ಕಾಲ ಬದಲಾದಂತೆ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆಗಳು ಬದಲಾಗುತ್ತವೆ, ಹೈಕಮಾಂಡ್ ಬಲಿಷ್ಠವಾದಂತೆ ರಾಜ್ಯ ನಾಯಕತ್ವ ದುರ್ಬಲಗೊಳ್ಳುತ್ತಾ ಹೋಗುತ್ತದೆ, 2021 ರಲ್ಲಿ ಬಿ ಎಸ್ ವೈ ರಾಜಿನಾಮೆ ಕೊಟ್ಟಾಗ ಪರಿಸ್ಥಿತಿ ಹೇಗಿತ್ತು ಅನ್ನೋದನ್ನ ನೆನಪಿಸಿಕೊಳ್ಳಿ, 2011 ರ ಪೀಕ್ ಯಡಿಯೂರಪ್ಪ ಕಳೆದು ಹೋಗಿದ್ದರು, ಯಾರ ಅಭಿಪ್ರಾಯವನ್ನು ಪಡೆಯದೆ ದೆಹಲಿಗೆ ಕರೆಯಿಸಿಕೊಂಡು ರಾಜಿನಾಮೆ ನೀಡುವಂತೆ ಅಮಿತ್ ಷಾ ಸೂಚಿಸಿದ್ದರು, ಅವತ್ತು ಯಡಿಯೂರಪ್ಪನವರಲ್ಲಿದದ್ದು ಕಣ್ಣೀರಷ್ಟೆ!!
ರಾಜಕಾರಣದಲ್ಲಿ ಅಧಿಕಾರದಿಂದ ಕೆಳಗಿಳಿಯುವಂತೆ ಜನಪ್ರಿಯ ನಾಯಕನನ್ನ ಓಲೈಸುವುದು ಕಷ್ಟವಾದರೂ ಹೈಕಮಾಂಡ್ ಅದನ್ನ ಮಾಡಿ ಮುಗಿಸಬಲ್ಲದು ಆದರೆ ಒಂದು ಸಮುದಾಯದ ಆಕ್ರೋಶವನ್ನ ತಣಿಸಲಾದೀತೆ?? 2023 ರ ಚುನಾವಣೆಯಲ್ಲಿ ಸಮುದಾಯ ಮುರ್ಕೊಂಡು ಬಿತ್ತಲ್ಲ, ಅವತ್ತೂ ಯಡಿಯೂರಪ್ಪನವರ ತಾಕತ್ತು ಮತ್ತೊಮ್ಮೆ ಅನಾವರಣಗೊಂಡಿತ್ತು!
ಸಿದ್ದರಾಮಯ್ಯನವರನ್ನ ಕೆಳಗಿಳಿಸಿದರೆ ಇತಿಹಾಸ ಮತ್ತೊಮ್ಮೆ ಮರುಕಳಿಸುತ್ತಾ?? ಸಿದ್ದರಾಮಯ್ಯ ಕೆಳಗಳಿದರೆ ಅಹಿಂದ ವರ್ಗದ ಕೆಂಗಣ್ಣಿಗೆ ಕಾಂಗ್ರೆಸ್ ಬಲಿಯಾಗುತ್ತಾ?? ಪ್ರಾಕ್ಟಿಕಲ್ ರಾಜಕೀಯದಿಂದಾಚೆಗೆ ಯೋಚಿಸಬೇಕಾದ ವಿಷಯವಿದು!!
90 ರ ದಶಕದ ಕಾಂಗ್ರೆಸ್ ಹೈಕಮಾಂಡ್ ಯಾವ ಮಟ್ಟಕ್ಕೆ ಬಲಿಷ್ಠವಾಗಿತ್ತೆಂದರೆ HAL ಏರ್ಪೋರ್ಟ್ ನಲ್ಲಿ ಮಾಧ್ಯಮದವರನ್ನ ಕರೆದ ರಾಜೀವ್ ಗಾಂಧಿ karnataka will have a new chief minister ಎಂದು ಹಠಾತ್ತನೆ ಘೋಷಿಸಿ ಹೋಗಿದ್ದರು, ವಿರೇಂದ್ರ ಪಾಟೀಲರು ಅಧಿಕಾರ ಕಳೆದುಕೊಂಡದ್ದೆ ಹಾಗೆ!! ವಿರೇಂದ್ರ ಪಾಟೀಲರನ್ನ ಕೆಳಗಿಳಿಸಿದ ಪರಿಣಾಮ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ನೆಲಕಚ್ಚಿತ್ತು, ಬಂಗಾರಪ್ಪನವರನ್ನ ಕರೆಯಿಸಿಕೊಂಡ ಪಿ ವಿ ನರಸಿಂಹರಾವ್ ನಾಜೂಕಾಗಿ ಮಾತನಾಡಿ ಕಳಿಸಿಕೊಟ್ಟರೂ ಜನಾರ್ಧನ ಪೂಜಾರಿ ಕೈಗೆ ಚೀಟಿಯೊಂದನ್ನ ಕೊಟ್ಟಿದ್ದರು ದೆಹಲಿ ವಿಮಾನ ನಿಲ್ದಾಣದಲ್ಲಿ ದ್ದಾಗಲೆ ರಾಜಿನಾಮೆ ನೀಡುವಂತೆ ಬಂಗಾರಪ್ಪನವರಿಗೆ ಹೈಕಮಾಂಡ್ ತಾಕೀತು ಮಾಡಿತ್ತು!! ನಂತರ ಪಿ ವಿ ನರಸಿಂಹರಾವ್ ನ ನೆಚ್ಚಿನ ಶಿಷ್ಯರಾಗಿದ್ದ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದರು!!
ಇವೆಲ್ಲಾ ಘಟನಾವಳಿಗಳನ್ನು ಗಮನಿಸಿದರೆ ಹೈಕಮಾಂಡ್ ಬಲಿಷ್ಠವಿದ್ದಾಗ ಮಾತ್ರ ಅಧಿಕಾರ ಹಸ್ತಾಂತರದ ಪ್ರಕ್ರಿಯೆಗಳು ಮುಲಾಜಿಲ್ಲದೆ ನಡೆದುಹೋಗಿದ್ದವು! ಇವತ್ತಿನ ಕಾಂಗ್ರೆಸ್ ಹೈಕಮಾಂಡ್ ಪರಿಸ್ಥಿತಿ ಶೋಚನೀಯವಾಗಿದೆ, ಯಾವ ಮಟ್ಟಕ್ಕೆ ಎಂದರೆ ಏರ್ಪೋರ್ಟ್ ನಲ್ಲಿ ಮುಖ್ಯಮಂತ್ರಿ ಬದಲಿಸುತ್ತಿದ್ದವರು ಈಗ ದೆಹಲಿಗೆ ಕರೆಯಿಸಿಕೊಂಡು ಸಂಧಾನ ಮಾಡುವ ಮಟ್ಟಕ್ಕೆ!!!
ಡಿಕೆ ಶಿವಕುಮಾರ್ ಮತ್ತೊಬ್ಬ ವೀರಪ್ಪ ಮೊಯ್ಲಿ ಆಗ್ತಾರಾ?? ಇಲ್ಲ ಸಿದ್ದರಾಮಯ್ಯ ಮತ್ತೊಬ್ಬ ವಿರೇಂದ್ರ ಪಾಟೀಲರಾಗ್ತಾರಾ?? ಕಾಲಾಯಾ ತಸ್ಮೈ ನಮಃ!...