31/12/2023
ಮನುವಿಕಾಸ ಸಂಸ್ಥೆಯಿAದ ಸಿದ್ದಾಪುರದಲ್ಲಿ ಮಹಿಳಾ ಸಮಾವೇಶ
ಮನುವಿಕಾಸ ಸ್ವಯಂಸೇವಾ ಸಂಸ್ಥೆಯು ಇಡಲ್ ಗೀವ್ ಫೌಂಡೇಶನ್ ಸಹಯೋಗದೊಂದಿಗೆ ೨೯ ಡಿಸೆಂಬರ್ ೨೦೨೩ ರಂದು ಸಿದ್ದಾಪುರದ ಶಂಕರ ಮಠದಲ್ಲಿ ಬೃಹತ್ ಮಹಿಳಾ ಸಮಾವೇಶವನ್ನು ಆಯೋಜಿಸಿತ್ತು.
ಸಾಗರ -ಹೊಸನಗರ ವಿಧಾನಸಭಾ ಕ್ಷೇತ್ರದ ಸಾಸಕರಾದ ಶ್ರೀ ಗೋಪಾಲಕೃಷ್ಣ ಬೆಳೂರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರರಾದ ಶ್ರೀ ಭೀಮಣ್ಣ ನಾಯ್ಕ ವಹಿಸಿದ್ದರು
ಇದೇ ಸಂದರ್ಭದಲ್ಲಿ ಸ್ವ-ಉದ್ಯೋಗದಿಂದ ಉದ್ಯಮಶೀಲರಾದ ಆಯ್ದ ಮಹಿಳೆಯರಿಗೆ, ಉತ್ತಮವಾಗಿ ಸ್ವ-ಸಹಾಯ ಸಂಘಗಳನ್ನು ನಿರ್ವಹಿಸುತ್ತಿರುವ ವಿವಿಧ ಸಂಘಗಳ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮನುವಿಕಾಸ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಗಣಪತಿ ಭಟ್ಟ ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಶಶಿಭೂಶಣ ಹೆಗಡೆ ಅತಿಥಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು, ವೈದ್ಯರು, ಪತ್ರಕರ್ತರು, ಇಲಾಖೆ ಅಧಿಕಾರಿಗಳು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಹಾಗೂ 800ಕ್ಕೂ ಅಧಿಕ ಸ್ವ-ಸಹಾಯ ಸಂಘಗಳ ಮಹಿಳೆಯರು ಉಪಸ್ಥಿತರಿದ್ದರು.