20/07/2026
ಯುಗಾಂತ್ಯ
ಬಹುಶಃ ಇಂದಿನ ವಿಶ್ವಕಪ್ ಫೈನಲ್ ಭವಿಷ್ಯದ ಫುಟ್ಬಾಲ್ ನ ದಿಕ್ಕು ಬದಲಿಸಿದೆ.
ಒಂದು ಕಡೆ ಸ್ಪೇನ್ ಸೈಲೆಂಟ್ ಆಗಿ ಫೈನಲ್ ಪ್ರವೇಶಿಸಿದರೆ ಮತ್ತೊಂದೆಡೆ ಅರ್ಜೆಂಟೀನಾ ತನ್ನ ಎಲ್ಲಾ ಶಕ್ತಿ ಬಳಿಸಿ ಫೈನಲ್ ತಲುಪಿತು.
ಫೈನಲ್ ನಲ್ಲಿ ನಿರೀಕ್ಷೆಯಂತೆ ಮೆಸ್ಸಿಯನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ಅದು ಅರ್ಜೆಂಟೀನಾ ಪಾಲಿಗೆ ಸಂಕಟವಾಯಿತು.
ಅರ್ಜೆಂಟೀನಾ ತಂಡಕ್ಕೆ ತನ್ನ ಎಂದಿನ dominant game ಆಡಲು ಸ್ಪೇನ್ ಅವಕಾಶವೇ ಕೊಡಲಿಲ್ಲ.
ಕೊನೆಗೂ ಸ್ಪೇನ್ extra time ನ ಒಂದು ಗೋಲ್ ನಿಂದ ವಿಶ್ವಕಪ್ ತನ್ನದಾಗಿಸಿಕೊಂಡಿತು.
ಇದರೊಂದಿಗೆ ಮೆಸ್ಸಿ ಯುಗ ಅಂತ್ಯವಾಯಿತು. ಜೊತೆಗೆ ದಕ್ಷಿಣ ಅಮೆರಿಕಾದ ಫುಟ್ಬಾಲ್ ಯುಗ ಸಹ.
ಕಳೆದ ಕೆಲವು ವಿಶ್ವಕಪ್ ಗಳಿಂದ ಅರ್ಜೆಂಟೀನಾ ಹೊರತುಪಡಿಸಿ ಇತರ ತಂಡಗಳು ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿವೆ. 2002ರ ವಿಶ್ವಕಪ್ ಗೆದ್ದ ನಂತರ ಬ್ರೆಜಿಲ್ ಸಾಕಷ್ಟು ಮಂಕಾಗಿದೆ. ಟೀಂ performance ದೊಡ್ಡಮಟ್ಟಿಗೆ ಕಂಡುಬಂದಿಲ್ಲ.. ಸುವಾರೆಜ್, ಕವಾನಿ ಮತ್ತು ಫೋರ್ಲಾನ್ ನಿವೃತ್ತಿಯ ಬಳಿಕ ಉರುಗ್ವೆ ತಂಡವೂ ಸಾಕಷ್ಟು ನಿತ್ರಾಣವಾಗಿದೆ.
ಆದರೆ ಮೆಸ್ಸಿ ನೇತೃತ್ವದಲ್ಲಿ ಅರ್ಜೆಂಟೀನಾ ಮೂರು ಬಾರಿ ಫೈನಲ್ ತಲುಪಿ, ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಬಹುಶಃ ಇದು ಒಟ್ಟು ದಕ್ಷಿಣ ಅಮೆರಿಕಾ ಫುಟ್ಬಾಲ್ ತಂಡದ last ಲ್ಯಾಪ್. ಮುಂದಕ್ಕೆ ಯುರೋಪ್ ಮತ್ತು ಆಫ್ರಿಕಾ ತಂಡಗಳ ಕಾರುಬಾರು ಹೆಚ್ಚಾಗಲಿದೆ.
ಮೆಸ್ಸಿಯಂತಹ ಮಾಂತ್ರಿಕ ಹುಟ್ಟುಬರಲು ಇನ್ನೂ ಒಂದು lifetime ಬೇಕಾಗಬಹುದು.
ರೊನಾಲ್ಡೊ ನಜಾರಿಯೋ, ನೆಮಾರ್, ರೊನಾಲ್ಡಿನೊ, ಮೆಸ್ಸಿರಂತಹ ಲೆಜೆಂಡ್ ಗಳ ಆಟವನ್ನು ಆಸ್ವಾದಿಸಿದ ನಾವೇ ಪುಣ್ಯವಂತರು.